ಬಾಗಲಕೋಟೆ: ಸಹಕಾರ ಕ್ಷೇತ್ರಕ್ಕೆ 125 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಜಾಗತೀಕರಣ, ಉದಾರೀಕರಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪೈಪೋಟಿಯ ಹೊರತಾಗಿಯೂ ಸಹಕಾರ ಕ್ಷೇತ್ರವು ಇಂದು ಅಭಿವೃದ್ಧಿ ಹೊಂದುತ್ತಿದೆ, ಇದಕ್ಕೆ ಸಹಕಾರಿ ಕ್ಷೇತ್ರದ ಪಿತಾಮಹ ಸಿದ್ದನಗೌಡ ಪಾಟೀಲ್ ಕಾರಣ ಎಂದು ರೋಣ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಹೇಳಿದರು.
ಬೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಹಕಾರ ಕ್ಷೇತ್ರಕ್ಕೆ ಕನ್ನಡಿಗರ ಕೊಡುಗೆ’ ವಿಷಯ ಕುರಿತು ಅವರು ಮಾತನಾಡಿದರು. ”ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ತತ್ವದಡಿ ಪರಸ್ಪರ ಸಹಕಾರ ಮತ್ತು ವಿಶ್ವಾಸದ ಆಧಾರದ ಮೇಲೆ ಎಲ್ಲರನ್ನೂ ಸಬಲೀಕರಣಗೊಳಿಸುವ ಶಕ್ತಿ ಸಹಕಾರಿ ಕ್ಷೇತ್ರಕ್ಕಿದೆ. ಏಷ್ಯಾದಲ್ಲಿ ಕರ್ನಾಟಕದಲ್ಲಿ ಈ ಸಹಕಾರವನ್ನು ಆರಂಭಿಸಿದ್ದು, ಇದಕ್ಕೆ ಅಡಿಪಾಯ ಹಾಕಿದವರು ಕಣಗಿನಹಾಳದ ಸಿದ್ದನಗೌಡ ಪಾಟೀಲ. ಸಾಮಾನ್ಯ ವರ್ಗದಲ್ಲಿ ಜನಿಸಿರುವ ಅವರು ಕರ್ನಾಟಕ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.