ನವಲಗುಂದ : ಶಿರಕೋಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು.
ಶಿರಕೋಳ ಮತ್ತು ಹನಸಿ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಾಗಿ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.ತುಪ್ಪರಿ ಹಳ್ಳಕ್ಕೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ, ಶ್ರೀ ಬಸವೇಶ್ವರ ಸಮುದಾಯ ಭವನ, ಶ್ರೀ ಕಲೇಶ್ವರ ಸಮುದಾಯ ಭವನ, ಹಿರೇಮಠ ರೈತ ಭವನಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ರೈತರ ಅನುಕೂಲಕ್ಕಾಗಿ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.ಗ್ರಾಮದಲ್ಲಿ ಆಯೋಜಿಸಲಾದ ಬೃಹತ್ ಉಚಿತ ಆರೋಗ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋದಾ ವಾಲಿಸುಂಕದ, ಉಪಾಧ್ಯಕ್ಷರಾದ ಶ್ರೀಮತಿ ಈರವ್ವ ಶಾಸ್ತ್ರಿಮಠ, ಶ್ರೀ ಕಬ್ಬುರ್,ಶ್ರೀ ಅಂದಾನಯ್ಯ ಹಿರೇಮಠ,ಶ್ರೀ ಅಡಿವೆಪ್ಪ ಮನಮಿ,ಶ್ರೀ ಶರಣಪ್ಪಗೌಡ ದಾನಪ್ಪಗೌಡ್ರ, ಶ್ರೀ ಯಕ್ಕುಂಡಿ, ಶ್ರೀ ನಿಂಬಣ್ಣ ಗಾಣಿಗೇರ,ಶ್ರೀ ಯಲ್ಲಪ್ಪ ಯಾದವಾಡ ನಾಯ್ಕರ, ಶ್ರೀ ಇಂಡಿ ಮರಿಗೌಡ್ರ ,ಶ್ರೀ ರಾಯಣ್ಣವರ ಗಾಣಿಗೇರ, ಅಧಿಕಾರಿ ವರ್ಗದವರು, ಗುರುಹಿರಿಯರು,ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.