ಹುಬ್ಬಳ್ಳಿ: ನಾನೇ ಆಕಾಂಕ್ಷಿ, ಯಾರು ಏನೇ ಮಾಡಿದ್ರೂ ಟಿಕೆಟ್ ತಪ್ಪಿಸಲು ಆಗೋದಿಲ್ಲ. ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಬೇರೆ ಕೆಲಸ ಇದೆ ಅದಕ್ಕೆ ಭೇಟಿ ಆಗಲಿಲ್ಲಾ. ಕುಂದಗೋಳ ಕ್ಷೇತ್ರದ ಅನುದಾನ ಪೇಡಿಂಗ್ ಇತ್ತು ಅದಗೋಸ್ಕರ್ ಸಿಎಂ ಅವರನ್ನು ಭೇಟಿ ಆಗಲು ಬಂದಿದ್ದೆ. ಭಿನ್ನಮತದಿಂದ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿಲ್ಲ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇಂದೇ ಆಯೋಜನೆ ಮಾಡಲಾಗಿದೆ. ಯಾವುದೇ ಒಳಜಗಳವಿಲ್ಲಾ ಎಂದು ಶಾಸಕಿ ಹೊರಟು ಹೋದರು .