ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಆಗಿದೆ ಎಂದು ಕೈಗಾರಿಕಾ, ವಾಣಿಜ್ಯ ಹಾಗೂ ಆಹಾರ ಮತ್ತು ನಾಗರಿಕ ಸಚಿವ ಪಿಯೋಷ ಪಿಯೋಷ ಗೋಯಲ್ ಹೇಳಿದರು.
ನಗರದ ಹೆಬಸೂರು ಭವನದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಮಾವೇಶ ಪ್ರಣಾಳಿಕೆ ಸಲಹಾ ಅಭಿಯಾನ ಅಂಗವಾಗಿ ನಡೆದ ಸಭೆ ನಂತರ ಹೊರುಡುವಾಗ ಮಾತನಾಡಿದರು.
ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಷ್ಟು ಅಭಿವೃದ್ಧಿ ಆಗಿದೆ. ಹೊಸ ಹೊಸ ಕೈಗಾರಿಕಾ ಕ್ರಾಂತಿಯೇ ನಡೆದಿದೆ ಎಂದರು.