ಕುಂದಗೋಳ : ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಹಾಗೂ ಎಂ.ಆರ್.ಪಾಟೀಲ್ ನೇರಾನೇರ ಸ್ಪರ್ಧೆ ನಡುವೆ ಕೊನೆ ಕ್ಷಣದಲ್ಲಿ ಎಂ.ಆರ್.ಪಾಟೀಲ್ ಪಾಲಾಗಿದೆ.
ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನ ಅಲಂಕರಿಸಿದ ಎಂ.ಆರ್.ಪಾಟೀಲ್ ಈ ಬಾರಿ ಭಾರತೀಯ ಜನತಾ ಪಕ್ಷದ ಟಿಕೆಟ್ ಪಡೆದಿದ್ದಾರೆ.
ಬಿಜೆಪಿ ಮೊದಲ ಹಂತದ ಪಟ್ಟಿಯಲ್ಲೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದಿರುವುದು ಆಶ್ಚರ್ಯಕರ ಬೆಳವಣಿಗೆಗೂ ಕಾರಣವಾಗಿ ಸದ್ಯ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಸದ್ಯ ಮಾಜಿ ಶಾಸಕ ಇನ್ನೋರ್ವ ಬಲಿಷ್ಠ ನಾಯಕ ಎಸ್.ಐ.ಚಿಕ್ಕನಗೌಡರ ಮುಂದಿನ ನಡೆ ಏನು ? ಪಕ್ಷ ಮಾಜಿ ಶಾಸಕರನ್ನು ಹೇಗೆ ? ಸಮಾಧಾನ ಪಡಿಸಲಿದೆ, ಯಾವ ಸ್ಥಾನ ನೀಡಲಿದೆ ? ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ.