ನವಲಗುಂದ: ಇಲ್ಲಿನ ನಿವಾಸಿ ವಿ ತೆಗ್ಗಿನಕೇರಿ ತಾಯಿಯೊಂದಿಗೆ ಶಲವಡಿ ಸಮೀಪದ ಖನ್ನೂರಿನ ಮೊಟಬವೇಶ್ವರ ದೇವಸ್ಥಾನಕ್ಕೆ ಬೈಕ್ ನಲ್ಲಿ ತೆರಳಿ ದೇವರ ದರ್ಶನ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ವಾಹನವೊಂದು ಬಂದಿದ್ದರಿಂದ ಬೈಕ್ ಅನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಿಲೋಮೀಟರ್ ಬೋರ್ಡ್ ರವಿ ಅವರ ಕುತ್ತಿಗೆಗೆ ತಾಗಿ ಸಾವನಪ್ಪಿದ ಘಟನೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ನಡೆದಿದೆ.
ರವಿ ಅವರ ತಾಯಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿನಲ್ಲೂ ಸಾರ್ಥಕತೆ: ರವಿ ಅವರ ಕಣ್ಣುಗಳನ್ನು ಕುಟುಂಬಸ್ಥರು ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ಮೂಲಕ ರವಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಅಪಘಾತದ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.