ಹುಬ್ಬಳ್ಳಿ: ನಮ್ಮ ತಂಡದಿಂದ ನಾಯಕರು ಹೊರಗೆ ಹೋದುದರಿಂದ ಯಾವುದೇ ನಷ್ಟವಾಗಲ್ಲ.ನಾವು ನಿವೃತ್ತಿಹೊಂದಲು ಹೇಳಿದ್ದೀವಿ ಆದರೆ ಅವರು ಬೇರೆ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ನಮ್ಮ ತಂಡದಲ್ಲಿ ಯುವಕರಿಗೆ ಅವಕಾಶ ಸಿಕ್ಕಿದೆ.. ಅವರು ಉತ್ಸಾಹದಿಂದ ಆಡಿ ಪಂದ್ಯ ಗೆಲ್ಲಿಸ್ತಾರೆ. ಈ ಸಲ ಕಪ್ ನಮ್ದೆ ಎಂದು ಪರೋಕ್ಷವಾಗಿ ಶೆಟ್ಟರ್ ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟಾಂಗ್ ಕೊಟ್ಟಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರಿಂದ 20 ರಿಂದ 30 ಕ್ಷೇತ್ರಕ್ಕೆ ಪ್ತಭಾವ ಬೀರುತ್ತದೆ ಎಂದು ಹೇಳಿದರು ಅದಕ್ಕೆ ಪ್ರತಿಕ್ರಿಯಿಸಿದ ಅವರು ಕನಸು ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗು ಹಕ್ಕಿದೆ ಅವರು ಕಾಣಲಿ ಬಿಡಿ. ಎಲ್ಲ ಸಮಾಜವು ಒಂದೆ. ಲಿಂಗಾಯತ ಸಮಾಜವನ್ನು ಗೌರವದಿಂದ ನೋಡಿದ್ದೇವೆ. ಕಾಂಗ್ರೆಸ್ ಸತತವಾಗಿ ಲಿಂಗಾಯತ ನಾಯಕರನ್ನು ಅಪಮಾನ ಮಾಡಿದೆ. ಅತೀ ಹೆಚ್ಚು ಲಿಂಗಾಯತ ಸಮಯದಾಯಕ್ಕೆ ಸೀಟ್ ನೀಡಲಾಗಿದೆ ಎಂದರು.