ವಿಜಯಪುರ: ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ಪಿಕಿನಿಕ್‌ಗೆ ಕರೆದುಕೊಂಡ ಹೊರಟಿದ್ದ ಟೆಂಪೋ ಟ್ರಾವೆಲ್ಸ್ ಪಲ್ಟಿಯಾಗಿದೆ.ಕ್ಲೀನರ್ ದಾವಲಸಾಬ ಅಲ್ಲಿಸಾಬ ಸಾಲವಾಡಗಿ (40) ಸಾವಿಗೀಡಾಗಿದ್ದಾರೆ.15 ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ದುರ್ಘಟನೆ ಶುಕ್ರವಾರ ಈ ಘಟನೆ ಮಡೆದಿದ್ದು, ತಾಳಿಕೋಟೆ ತಾಲೂಕಿನ ಚೋಕಾರಿ ಸರಕಾರಿ ಪ್ರಾಥಮಿಕ ಶಾಲೆಯ 30 ಕ್ಕೂ ಹೆಚ್ಚು ಮಕ್ಕಳನ್ನು ಹೊತ್ತುಕೊಂಡು ಆಲಮಟ್ಟಿ ಕಡೆಗೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಶಿಕ್ಷಣ ಇಲಾಖೆ ಅನುಮತಿ ಇಲ್ಲದೇ ಶಾಲಾ ಮಕ್ಕಳು ಪಿಕ್ ನಿಕ್ ಗೆ ಹೊರಟಿದ್ದರೆಂದು ತಿಳಿದು ಬಂದಿದೆ.