ಸಿಂದಗಿ : ಪಟ್ಟಣದಲ್ಲಿ ಕೆಲ ದಿನಗಳ ಹಿಂದೆನಡೆದ ಸಾರ್ವಜನಿಕರಿಗೆ ಸಂಚಲನ ಮೂಡಿಸಿದ ದರೋಡೆಕೊರರು ಜನರ ಮದ್ಯದಲ್ಲಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಂದಗಿ ಪಟ್ಟಣದ ಶಾಂತೇಶ್ವರ ಮಠದ ಹತ್ತಿರ ಇರುವ ಅಶೋಕ ಕಾಂಬಳೆ ಇವರ ಕಾಂಪ್ಲೆಕ್ಷದ ನೆಲಮಾಡಿಗೆಯಲ್ಲಿ ಬಾಡಿಗೆ ಇರುವ ಜ್ಯೂವೇಲರ್ನ ಅಂಗಡಿಯಲ್ಲಿ, ಯಾರೋ ನಾಲ್ಕು ಜನ ಅಪರಿಚಿತರು ಮುಖಕ್ಕೆ ಕರಿ ಬಣ್ಣದ ಮಾಸ್ಕ್ ಹಾಕಿಕೊಂಡು ತಮ್ಮ ಕೈಯಲ್ಲಿ ಕಂಟ್ರಿ ಪಿಸ್ತೂಲ್, ಮಚ್ಚುಗಳನ್ನು, ಹಿಡಿದುಕೊಂಡು, ಸುಚಿತವಾಗಿ ಸುಲಗೆ ಮಾಡುವ ಉದ್ದೇಶದಿಂದ ಅಂಗಡಿಯ ಒಳಗೆ ಬಂದು ನಾಗರಾಜ ಈರಣ್ಣ ಪತ್ತಾರ ಇವರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಲಗೆ ಮಾಡಲು ಪ್ರಯತ್ನಿಸಿ ಓಡಿ ಹೋಗಿರುತ್ತಾರೆ ಎಂದು ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಅಂದು ಸಾರ್ವಜನಿಕರ ದೈರ್ಯದಿಂದ ಸಿಂದಗಿ ಪೊಲೀಸ ಸಿಬ್ಬಂದಿಗಳಿಗೆ ಇಬ್ಬರು ಆರೋಪಿಗಳನ್ನು ಹಿಡಿದುಕೊಟ್ಟಿರುವ ಬಗ್ಗೆ ವರದಿ ಮಾಡಲಾಗಿತ್ತು.