News Kannada
Friday, December 09 2022

ಬೆಂಗಳೂರು

ಬಿಬಿಎಂಪಿ ಯಿಂದ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಅಭಿಯಾನ

Photo Credit :

ಬೆಂಗಳೂರು ; ಕೋವಿಡ್ ಮೂರನೇ ಅಲೆ ಹಿನ್ನೆಲೆ, ಸೋಮವಾರದಿಂದ(ಆ.16) ಬಿಬಿಎಂಪಿ ವ್ಯಾಪ್ತಿಯಲ್ಲಿ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 54 ವಾರ್ಡ್​​​​ಗಳಲ್ಲಿ ಅಭಿಯಾನ ಆರಂಭಿಸಲಾಗುತ್ತದೆ. ಕೊರೋನಾ 3ನೇ ಅಲೆ ತಡೆಯಲು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
ಪ್ರತೀ ವಾರ್ಡ್​​​ಗೆ 5 ವೈದ್ಯಕೀಯ ಸಿಬ್ಬಂದಿ ಇರುವ ತಂಡವೊಂದನ್ನು ನಿಯೋಜನೆ ಮಾಡಲಾಗುತ್ತದೆ. ಒಂದು ವೈದ್ಯಕೀಯ ತಂಡ ಪ್ರತಿನಿತ್ಯ ಕನಿಷ್ಠ 50 ಮನೆಗೆ ಭೇಟಿ ಕೊಡಬೇಕು. ಪ್ರತೀ ತಂಡದಲ್ಲಿ ಓರ್ವ ವೈದ್ಯ, ಸೇರಿ ಮೂರರಿಂದ ನಾಲ್ಕು ಸಿಬ್ಬಂದಿ ಇರಲಿದ್ದಾರೆ.ಪ್ರತೀ ಮನೆಯಲ್ಲಿರುವ ಪ್ರತಿಯೊಬ್ಬರ ಮಾಹಿತಿಯನ್ನೂ ಈ ತಂಡ ಸಂಗ್ರಹಿಸಲಿದೆ. ಯಾರಿಗೆ ದೀರ್ಘಕಾಲದ ಅನಾರೋಗ್ಯವಿದೆ? ಕೋವಿಡ್ ಲಕ್ಷಣಗಳಿದ್ಯಾ? ಹೀಗೆ ಪ್ರತಿಯೊಬ್ಬರ ಆರೋಗ್ಯದ ಮಾಹಿತಿಯನ್ನು ವೈದ್ಯಕೀಯ ತಂಡ ಸಂಗ್ರಹಿಸಲಿದೆ.

See also  ಸಣ್ಣ–ಮಧ್ಯಮ ರೈತರಿಂದ ಲಾಭದಾಯಕ ಕೃಷಿ: ಶೋಭಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು