ಬೆಂಗಳೂರು: ‘ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ನಿತ್ಯ 400 ಅಥವಾ ಅದಕ್ಕಿಂತಲೂ ಹೆಚ್ಚು
ಲಸಿಕೆಯನ್ನು ಆದ್ಯತೆ ಮೇರೆಗೆ ಪೂರೈಕೆ ಮಾಡಲಾಗುತ್ತಿದೆ. ನಿತ್ಯ 80,000 ರಿಂದ
90,000 ಮಂದಿ ಲಸಿಕೆ ಪಡೆಯುತ್ತಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್
ಗುಪ್ತ ಹೇಳಿದರು.
ನಗರದ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಹೋಟೆಲ್ ಸಂಘಟನೆಗಳು ಹಾಗೂ
ಸೇರಿದಂತೆ ಇನ್ನಿತರೆ ಸಂಘಗಳ ಜೊತೆ ಶುಕ್ರವಾರ ಆನ್‌ಲೈನ್‌ನಲ್ಲಿ ನಡೆದ ಸಭೆಯಲ್ಲಿ
ಅವರು ಮಾತನಾಡಿದರು. ’ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್,
ರೆಸ್ಟೋರೆಂಟ್, ಕಚೇರಿಗಳು ಹಾಗೂ ಹೆಚ್ಚು ಜನಸೇರುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ
ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು’ ಎಂದರು. ‘ನಗರದಲ್ಲಿ ಶೇ 74 ರಷ್ಟು
ಮೊದಲನೇ ಡೋಸ್ ಹಾಗೂ ಶೇ 26 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ’ ಎಂದರು.
‘50 ಹಾಗೂ ಅದಕ್ಕಿಂತ ಹೆಚ್ಚಿನ ಮಂದಿ ಲಸಿಕೆ ಪಡೆಯಬೇಕಾದರೆ ಪಾಲಿಕೆ ವತಿಯಿಂದ ವಿಶೇಷ
ಲಸಿಕಾ ಶಿಬಿರದ ವ್ಯವಸ್ಥೆ ಮಾಡಿ ಸ್ಥಳಕ್ಕೆ ಬಂದು ಲಸಿಕೆ ನೀಡಲಾಗುವುದು’ ಎಂದೂ
ಹೇಳಿದರು. ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್, ‘ಇದೇ 31ರೊಳಗೆ ಎಲ್ಲ ಸಿಬ್ಬಂದಿ
ಲಸಿಕೆ ಪಡೆದಿರಬೇಕು. ಸೆಪ್ಟೆಂಬರ್ 1 ರಿಂದ ಪಾಲಿಕೆಯ ಆರೋಗ್ಯಾಧಿಕಾರಿಗಳು,
ಮಾರ್ಷಲ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋವಿಡ್
ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದರೆ ನಿಯಮಾನುಸಾರ ದಂಡ ವಿಧಿಸಲಿದ್ದಾರೆ’ ಎಂದು
ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 80 ರಿಂದ 90 ಸಾವಿರ ಮಂದಿಗೆ ಲಸಿಕೆ: ಆಯುಕ್ತ ಗೌರವ್ ಗುಪ್ತ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.