ಬೆಂಗಳೂರು : ಸುಪ್ರೀಂ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಅರ್ಜಿ ಭಾಗಿ ಇರುವ ಹಿನ್ನಲೆಯಲ್ಲಿ, ಬಿಬಿಎಂಪಿ ಚುನಾವಣೆಗೆ ತಡೆಯಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ರೇ, ಬಿಬಿಎಂಪಿ ಚುನಾವಣೆಗೆ ಚುನಾವಣಾ ಆಯೋಗ ಡೇಟ್ ಫಿಕ್ಸ್ ಮಾಡಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಈ ಮೂಲಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ರೇ.. ಚುನಾವಣೆ ಘೋಷಣೆಯಾಗಲಿದೆ. ಇದೇ ಸಂದರ್ಭದಲ್ಲಿ ಸಾಲು ಸಾಲು ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಹೀಗೆ ಬಿಜೆಪಿಗೆ ಸೇರುತ್ತಿರುವಂತ ಕಾಂಗ್ರೆಸ್ ಪಕ್ಷದವರಿಗೆ ಬಿಜೆಪಿಯಿಂದ ಬಿಬಿಎಂಪಿ ಚುನಾವಣೆಗೆ ಟಿಕೆಟ್ ನೀಡೋದಕ್ಕೆ ಶಾಸಕರು ಒಲವು ತೋರಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಯವರ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಜೊತೆಗೆ ನಾವು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಅಭ್ಯರ್ಥಿಯ ವಿರುದ್ಧವೇ ಸೋತಿದ್ದೇವೆ. ಅಂತಹ ಅಭ್ಯರ್ಥಿ ಬಿಜೆಪಿಗೆ ಬಂದ ಕಾರಣ ಅವರಿಗೆ ಟಿಕೆಟ್ ನೀಡಿದ್ರೇ.. ನಾವೇನು ಮಾಡಬೇಕು ಎಂಬುದಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇನ್ನೂ ಸಾಲು ಸಾಲು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರೋದ್ರಿಂದ, ಕಾಂಗ್ರೆಸ್ ಗೆ ಬಿಬಿಎಂಪಿ ಚುನಾವಣೆಗಾಗಿ ಅಭ್ಯರ್ಥಿ ಹುಡುಕುವುದೇ ದೊಡ್ಡ ಸವಾಲ್ ಆಗಿದೆ. ಹೊಸ ಗೆಲುವಿನ ಮುಖಗಳಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದ್ದು, ಗೆಲ್ಲುವ ಕುದುರೆಯ ಬಾಲ ಹಿಡಿಯಲು ಕಾಂಗ್ರೆಸ್ ಹೆಣಗಾಡುತ್ತಿದೆ ಎನ್ನಲಾಗಿದೆ.