News Kannada
Friday, September 30 2022

ಬೆಂಗಳೂರು

ರಾಜ್ಯದಲ್ಲಿ ಇದುವರೆಗೂ 45.14 ಲಕ್ಷ ಜನರು ಎರಡನೇ ಡೋಸ್ ಪಡೆದಿಲ್ಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆ - 1 min read

Photo Credit :

ಬೆಂಗಳೂರು, ನ, 12 ; ಕರ್ನಾಟಕದಲ್ಲಿ ಗುರುವಾರದ ತನಕ 6,77,12,118 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಗುರುವಾರ 1,36,608 ಡೋಸ್ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಇದುವರೆಗೂ 45.14 ಲಕ್ಷ ಜನರು ಎರಡನೇ ಡೋಸ್ ಪಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಅಕ್ಟೋಬರ್ 10ರ ತನಕ 41.66 ಲಕ್ಷ ಜನರು 2ನೇ ಡೋಸ್ ಪಡೆಯಲು ಬಂದಿರಲಿಲ್ಲ. ಈಗ ಆ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಜನರು ಮಾತ್ರ ಎರಡನೇ ಡೋಸ್ ಲಸಿಕೆ ಪಡೆಯಲು ಗೈರಾಗಿಲ್ಲ. 77,406 ಆರೋಗ್ಯ ಕಾರ್ಯಕರ್ತರು, 2.62 ಲಕ್ಷ ಮುಂಚೂಣಿ ಕಾರ್ಯಕರ್ತರು ಸಹ 2ನೇ ಡೋಸ್ ಲಸಿಕೆ ಪಡೆದಿಲ್ಲ ಎಂದು ಅಂಕಿ ಅಂಶಗಳು ಹೇಳುತ್ತವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ 66.46 ಲಕ್ಷ 2ನೇ ಡೋಸ್ ಲಸಿಕೆ ನೀಡಲಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ 13.25 ಲಕ್ಷ ನೀಡಲಾಗಿದೆ. ಅಕ್ಟೋಬರ್‌ನಲ್ಲಿ ಹಬ್ಬಗಳು ಆರಂಭವಾದ ಬಳಿಕ ಜನರು ಕೋವಿಡ್ ಲಸಿಕೆ ಪಡೆಲು ಆಗಮಿಸಿಲ್ಲ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಎಲ್ಲಿ ಹೆಚ್ಚು ಗೈರು? ಎರಡನೇ ಡೋಸ್ ಲಸಿಕೆ ಪಡೆಯಲು ವಿವಿಧ ಜಿಲ್ಲೆಗಳಲ್ಲಿ ಜನರು ಗೈರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 11.84 ಲಕ್ಷ, ಬೆಳಗಾವಿ 2.54 ಲಕ್ಷ, ಮೈಸೂರು 2.39 ಲಕ್ಷ, ಬೆಂಗಳೂರು ಗ್ರಾಮಾಂತರದಲ್ಲಿ 2.19 ಲಕ್ಷ, ಕಲಬುರಗಿ 1.72 ಲಕ್ಷ ಜನರು 2ನೇ ಡೋಸ್ ಲಸಿಕೆ ಪಡೆದಿಲ್ಲ.

ಆರೋಗ್ಯ ಇಲಾಖೆ ಆಯುಕ್ತ ಡಿ. ರಣದೀಪ್ ಅಕ್ಟೋಬರ್‌ನಲ್ಲಿ ಲಸಿಕೆ ನೀಡುವ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಹಬ್ಬಗಳು ಇದ್ದಿದ್ದರಿಂದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಲಸಿಕೆ ಪಡೆಯು ಜನರ ಸಂಖ್ಯೆ ಕಡಿಮೆಯಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಪಡೆದ ಸಾವಿರಾರು ಜನರು 2ನೇ ಡೋಸ್ ಪಡೆಯಲು ಆಗಮಿಸಿಲ್ಲ. ಎರಡನೇ ಡೋಸ್‌ಗಾಗಿಯೇ ಹಣ ಪಾವತಿ ಮಾಡಿ ಆಸ್ಪತ್ರೆಗಳು ಖರೀದಿ ಮಾಡಿದಿ ಲಸಿಕೆ ಹಾಗೆಯೇ ಉಳಿದಿವೆ. ಕೆಲವು ದಿನಗಳಲ್ಲಿ ಅವುಗಳ ದಿನಾಂಕಗಳು ಪೂರ್ಣಗೊಳ್ಳಲಿದ್ದು, ನಷ್ಟವಾಗಲಿವೆ.

ಸ್ಪರ್ಶ ಆಸ್ಪತ್ರೆ ಬೆಂಗಳೂರಿನ 4 ಮತ್ತು ಹಾಸನದ ಒಂದು ಕಡೆ ಕೋವಿಡ್ ಲಸಿಕೆ ನೀಡುತ್ತಿದೆ. ಆಸ್ಪತ್ರೆಯಲ್ಲಿ 99 ಸಾವಿರ ಡೋಸ್ ಕೋವಿಶೀಲ್ಡ್ ಸಂಗ್ರಹವಿದೆ. ಇವುಗಳ ದಿನಾಂಕಗಳು ಮಾರ್ಚ್ 2022ರಲ್ಲಿ ಪೂರ್ಣಗೊಳ್ಳಲಿವೆ. ಎರಡನೇ ಡೋಸ್ ಪಡೆಯಲು ಜನರು ಬರದಿದ್ದರೆ ಅವುಗಳನ್ನು ವಾಪಸ್ ಪಡೆಯುವಂತೆ ಸೆರೆಂ ಇನ್ಸಿಟ್ಯೂಟ್‌ಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

ಸ್ಪರ್ಶ ಆಸ್ಪತ್ರೆಯಲ್ಲಿ ಪ್ರತಿದಿನ 15 ರಿಂದ 20 ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. 15,000 ಡೋಸ್ ಕೋವ್ಯಾಕ್ಸಿನ್ ಸಂಗ್ರಹವಿದೆ. ಇದಕ್ಕಿಂತಲೂ ಹೆಚ್ಚು ಕೋವಿಶೀಲ್ಡ್ ಬಾಕಿ ಉಳಿದಿದೆ. ಜನರು ಲಸಿಕೆ ಪಡೆಯಲು ಆಗಮಿಸದಿದ್ದರೆ ಲಸಿಕೆ ವಾಪಸ್ ಕಳಿಸುವುದು ಮಾತ್ರ ಉಳಿದಿರುವ ಮಾರ್ಗವಾಗಿದೆ.

ಅಪೋಲೋ ಆಸ್ಪತ್ರೆಯಲ್ಲಿ 18,000 ಡೋಸ್ ಕೋವಿಶೀಲ್ಡ್, ನಾರಾಯಣ ಹೆಲ್ತ್‌ನಲ್ಲಿ 35,000 ಕೋವಿಶೀಲ್ಡ್, ಸುಗುಣ ಆಸ್ಪತ್ರೆಯಲ್ಲಿ 1,350 ಡೋಸ್ ಕೋವಿಶೀಲ್ಡ್, ಮಣಿಪಾಲ್ ಆಸ್ಪತ್ರೆಯಲ್ಲಿ 8,448 ಡೋಸ್ ಕೋವಿಶೀಲ್ಡ್ ಸಂಗ್ರವಿದೆ. ಇವುಗಳ ದಿನಾಂಕ ಮಾರ್ಚ್‌ನಲ್ಲಿ ಕೊನೆಯಾಗಲಿದೆ.

See also  100 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆ, ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದ ನರೇಂದ್ರ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು