News Kannada
Wednesday, February 08 2023

ಬೆಂಗಳೂರು

 ರಸ್ತೆ ಬದಿಯಲ್ಲಿ ನವಜಾತ ಶಿಶು ಪತ್ತೆ : ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಮಹಿಳೆ

Photo Credit :

 ಬೆಂಗಳೂರು: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯ ಐದನೇ ಅಡ್ಡ ರಸ್ತೆ ಬಳಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದ್ದು, ಸ್ಥಳೀಯರಾದ ರತ್ನ ಎಂಬ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾಳೆ. ಮುಂಜಾನೆ ಐದು ಗಂಟೆ ಸಮಯ ಇದ್ದಕ್ಕಿದ್ದಂತೆ ಎತ್ತಲ್ಲಿಂದಲೋ ಮಗು ಅಳವ ಶಬ್ದ ಕೇಳಿದೆ.

ಕೂಡಲೇ ಹೊರಗಡೆ ಬಂದ ಮಹಿಳೆಗೆ ರಸ್ತೆ ಬದಿಯಲ್ಲಿ ಆಗ ತಾನೇ ಜನಿಸಿದ ನವಜಾತ ಶಿಶು ಕಾಣಿಸಿದೆ. ಮೈಗಂಟಿದ್ದ ರಕ್ತ ಕೂಡ ಒರೆಸದೇ ಬಿಟ್ಟು ಹೋಗಿದ್ದ ಶಿಶುವನ್ನು ಕಂಡು ತಾಯಿ ಹೃದಯದ ಮಹಿಳೆ ರತ್ನ ಶಿಶುವಿಗೆ ಕೂಡಲೇ ಬಿಸಿ ನೀರ ಸ್ನಾನ ಮಾಡಿಸಿ ಹಾಲು ನೀಡಿದ್ದಾರೆ..

ಇನ್ನೂ ಇತ್ತೀಚೆಗೆ ತಾನೇ ಗಂಡ ಕಳೆದುಕೊಂಡಿದ್ದ ಮಹಿಳೆ ರತ್ನ ಇರುವ ಒಬ್ಬ ಮಗನ ಜೊತೆ ದೇವರು ಕೊಟ್ಟ ಮಗಳು ಎಂದು ತಾವೇ ಸ್ವತಃ ಮಗುವನ್ನು ಪೋಷಣೆ ಮಾಡಲು ಮುಂದಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಕಾನೂನು ರೀತಿಯಲ್ಲಿ ತನಗೆ ದತ್ತು ನೀಡುವಂತೆ ಕೇಳಿದ್ದಾರೆ. ಆದ್ರೆ ಮೊದಲು ಶಿಶುವಿನ ಆರೋಗ್ಯ ಮುಖ್ಯ ಎಂದು ಕೂಡಲೇ ನಗರದ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು,

ಅಲ್ಲಿನ ವೈದ್ಯರು ಮೂರು ದಿನಗಳ ಕಾಲ ಮಗುವಿನ ಹಾರೈಕೆ ಜೊತೆಗೆ ನಿಗಾ ವಹಿಸಬೇಕು ಎಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಹುಟ್ಟಿದ ಕೆಲವೇ ಕ್ಷಣಗಳಲ್ಲಿ ತಾಯಿಯಿಂದ ದೂರಾದ ಶಿಶುವಿನ ಹಾರೈಕೆ ಜವಾಬ್ದಾರಿ ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರ ಮೇಲಿದೆ. ವೈದ್ಯರು ಸೂಚಿಸಿದ ಬಳಿಕ ತನಗೆ ಮಗು ದತ್ತು ನೀಡಿದರೆ ಪೋಷಣೆ ಮಾಡುವುದು ಮಗುವನ್ನು ರಕ್ಷಣೆ ಮಾಡಿದ ಮಹಿಳೆ ರತ್ನ ತಿಳಿಸಿದ್ದಾರೆ.

See also  ಬೆಂಗಳೂರು : ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು