News Kannada

ಬೆಂಗಳೂರು

ಇ-ತ್ಯಾಜ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ಅರಿವು ಅಗತ್ಯ: ನ್ಯಾಯಮೂರ್ತಿ ಸುಭಾಷ್‌ ಅಡಿ - 1 min read

ಬೆಂಗಳೂರು : ಉತ್ಪತ್ತಿಯಾಗುವ ಶೇಕಡಾ 80 ರಷ್ಟು ಇ-ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾಗಿದ್ದು, ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದು ಕರ್ನಾಟಕದ ಘನ ತ್ಯಾಜ್ಯ ನಿರ್ವಹಣೆಯ ನ್ಯಾಷನಲ್‌ ಗ್ರೀನ್‌ ಟ್ರೀಬ್ಯೂನಲ್‌ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್‌ ಆಡಿ ಅವರು ಕರೆ ಹೇಳಿದರು.

ಇಂದು ಬೆಂಗಳೂರಿನಲ್ಲಿ ಊರ್ಧವ್ ಮ್ಯಾನೇಜ್ಮೆಂಟ್ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ನಗರದಲ್ಲಿ ಆಯೋಜಿಸಲಾಗಿರುವ ಇ-ತ್ಯಾಜ್ಯ ಹಾಗೂ ವಿದ್ಯುನ್ಮಾನ ತ್ಯಾಜ್ಯ ಮರುಬಳಕೆ ಹಾಗೂ ನಿರ್ವಹಣೆಯ ಕ್ಷೇತ್ರದ ದೇಶದಲ್ಲೇ ದೊಡ್ಡ ಎಕ್ಸ್ಪೋ ರಿ ಕಾಮರ್ಸ್‌ 2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇ-ತ್ಯಾಜ್ಯ ನಿರ್ವಹಣೆ ವಿಶ್ವದಲ್ಲೆ ಅತಿ ದೊಡ್ಡ ಸಮಸ್ಯೆ ಆಗಲಿದೆ. ಉತ್ಪತ್ತಿಯಾಗುವ ಶೇಕಡಾ 80 ಇ-ತ್ಯಾಜ್ಯಗಳ ಮುರುಬಳಕೆ ಸಾಧ್ಯ.  ಈ ನಿಟ್ಟಿನಲ್ಲಿ ಸಮರ್ಪಕ ನಿರ್ವಹಣೆ, ಪುನರ್‌ಬಳಕೆ ಹಾಗೂ ವೈಜ್ಞಾನಿಕ ಸಂಸ್ಕರಣೆಯ ವಿಷಯದಲ್ಲಿ ಇನ್ನು ಸಾಕಷ್ಟು ಕೆಲಸಗಳು ನಡೆಯಬೇಕಾಗಿದೆ. ನಮ್ಮ ದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ 2016 ರಲ್ಲಿ ಕಾಯಿದೆಯನ್ನು ರೂಪಿಸಲಾಗಿದೆ.

ಈ ಕಾಯಿದೆ ಅಡಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಗೂ ಅವಕಾಶ ಒದಗಿಸಲಾಗಿದೆ. ಇ-ತ್ಯಾಜ್ಯದ ಉತ್ಪಾದನೆ ಹಾಗೂ ಅದರ ಸಮರ್ಪಕ ವಿಲೇವಾರಿಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಕಡಿಮೆ ಇದೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟಂತಹ ಸಂಸ್ಥೆಗಳು ಹಾಗೂ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ನಿಜವಾದ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ಅವರಲ್ಲಿ ಪರಿಸರ ಪೂರಕವಾದಂತಹ ವೈಜ್ಞಾನಿಕ ತಾಂತ್ರಿಕತೆಯನ್ನು ಅಳವಡಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಶಾಂತಾ ತಿಮ್ಮಯ್ಯ ಮಾತನಾಡಿಅಕ್ಟೋಬರ್‌ 14 ನ್ನು ವಿಶ್ವ ಇ-ತ್ಯಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳುಗಳ ಕಾಲ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. 2019-20 ರಲ್ಲಿ ದೇಶದಲ್ಲಿ 2.3 ಮಿಲಿಯನ್‌ ಟನ್‌ ಗಳಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗಿದೆ.

ನಮ್ಮ ರಾಜ್ಯದಲ್ಲಿ 0.1 ಮಿಲಿಯನ್‌ ನಷ್ಟು ತ್ಯಾಜ್ಯ ಉತ್ಪತ್ತಿಯಾಗಿದ್ದು ಅದರ ನಿರ್ವಹಣೆ ಬಹಳ ಸವಾಲೇ ಸರಿ. ಉತ್ಪತ್ತಿಯಾಗುವಂತಹ ಬಹಳಷ್ಟು ಇ-ತ್ಯಾಜ್ಯ ಅಸಂಘಟಿತವಾದ ಕ್ಷೇತ್ರದ ಮೂಲಕ ಪರಿಷ್ಕರಣೆಗೆ ಒಳಪಡುತ್ತಿದೆ. ಇದರಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಬಹಳಷ್ಟು. ಇದನ್ನ ಸರಿದಾರಿಗೆ ತರುವ ನಿಟ್ಟಿನಲ್ಲಿ ನಾವುಗಳು ಸರಿಯಾದ ಮೂಲಭೂತ ಸೌಕರ್ಯದ ಕೊರತೆ, ಕೈಗಾರಿಕೆಯನ್ನು ಸ್ಥಾಪಿಸಲು ಬೇಕಾದಂತಹ ಹೆಚ್ಚಿನ ಹಣ ಇವೆಲ್ಲವುಗಳಿಂದ ಸರಿಯಾದ ಪ್ರಮಾಣದಲ್ಲಿ ಸೌಲಭ್ಯಗಳು ಸೃಷ್ಟಿಯಾಗಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯವಿರುವಂತಹ ಎಲ್ಲಾ ಸಹಕಾರವನ್ನು ಈ ಕೈಗಾರಿಕೆಗಳಿಗೆ ನೀಡಲಾಗುವುದು. ಹಾಗೆಯೇ, ಅನುಮತಿಯನ್ನು ಶೀಘ್ರವಾಗಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಮಾಲಿನ್ಯದಿಂದ ಮನುಕುಲ ತತ್ತರಿಸಿದೆ.ಮನುಕುಲ ಉಳಿಯಬೇಕು ಎಂದರೆ ಮಾಲಿನ್ಯ ನಿಯಂತ್ರಣಕ್ಕೆ ಬರಬೇಕು. ಘನ, ಮಲ, ಇ ತ್ಯಾಜ್ಯ, ಬ್ಯಾಟರೀ ತ್ಯಾಜ್ಯ, ಆಟೋಮೊಬೈಲ್‌ ತ್ಯಾಜ್ಯದಿಂದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳು ಆಗುತ್ತವೆ. ಅದನ್ನ ಸರಿಯಾಗಿ ನಿರ್ವಹಣೆ ಗೊತ್ತಿಲ್ಲದೆ ಹಲವರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮತ್ತು ಸಂಸ್ಕರಣೆ ಮಾಡುವುದು ಅಗತ್ಯ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿವೆ. ಇಂತಹ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆ ಅಗುವುದರಿಂದ ಪರಿಸರವೂ ಸ್ವಚ್ಚವಾಗುತ್ತದೆ. ಅಲ್ಲದೆ, ನಾವೆಲ್ಲರೂ ಝೀರೋ ವೇಸ್ಟ್‌ ಉತ್ಪಾದನಾ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

See also  ಕೊರೋನಾ 3ನೇ ಅಲೆ ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕಿದೆ ; ಡಾ.ಸಿ.ಎನ್.ಮಂಜುನಾಥ್

ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಊರ್ಧವ್ ಮ್ಯಾನೇಜ್ಮೆಂಟ್ ನ ಸಂಸ್ಥಾಪಕ ರು ಹಾಗೂ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ರೆಡ್ಡಿ ಪಾಟೀಲ್, ದೇಶ-ವಿದೇಶದ ಹಲವಾರು ತಂತ್ರಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು