ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ಪರಿಷ್ಕರಣೆ -2023ರ ಸಂಬಂಧ ಮತದಾರರಿಂದ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಖಾಸಗಿ ವ್ಯಕ್ತಿ, ಏಜೆನ್ಸಿಯನ್ನು ನೇಮಿಸಿಲ್ಲ. ಸಾರ್ವಜನಿಕರಿಗೆ ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟುವ ಸಲುವಾಗಿ ಯಾವುದೇ ಕಾನೂನಿನ ಉಲ್ಲಂಘನೆ ಆಗಬಾರದೆಂಬ ಉದ್ದೇಶದಿಂದ, ಜಿಲ್ಲೆಯಿಂದ ಅಧಿಕೃತಗೊಳಿಸದ ಯಾವುದೇ ಏಜೆನ್ಸಿಯಿಂದ ಅಂತಹ ಎಲ್ಲಾ ಚಟುವಟಿಕೆಗಳನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರಿಗೆ ನಿರ್ಬಂಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ಲತಾ ಅವರು ಆದೇಶಿಸಿದ್ದಾರೆ.
ಖಾಸಗಿ ವ್ಯಕ್ತಿಗಳು, ಎನ್‌ಜಿಒಗಳು ಮತ್ತು ಕಂಪನಿಗಳು ಸಾರ್ವಜನಿಕರ ಮನೆಗೆ ಭೇಟಿ ನೀಡಿ ಮತದಾರರ ವೈಯಕ್ತಿಕ ಮಾಹಿತಿಯನ್ನು ಕೈಯಾರೆ ಅಥವಾ ಐಟಿ ಮೂಲಕ ಸಂಗ್ರಹಿಸಲು ಪ್ರಯತ್ನಿಸುತ್ತಿವೆ ಎಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದೂರುಗಳು ಮತ್ತು ಆರೋಪಗಳನ್ನು ಮಾಡಿದ ಹಿನ್ನಲೆಯಲ್ಲಿ ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು, ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಂತೆ ವರ್ತಿಸುವುದು. ಇದು ಮತದಾರರ ಮನಸ್ಸಿನಲ್ಲಿ ಆತಂಕವನ್ನು ಉಂಟು ಮಾಡಬಹುದು ಮತ್ತು ಪ್ರಜಾ ಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉತ್ಸಾಹವನ್ನು ಕುಗ್ಗಿಸುವುದಲ್ಲದೆ, ಕೆಲವರು ಮತದಾರರಾಗಿ ಸೇರ್ಪಡೆಗೊಳ್ಳಲು ಸಕ್ರಿಯವಾಗಿ ಮುಂದೆ ಬರುವುದನ್ನು ತಡೆಯಬಹುದು.
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 72 ಗೌಪ್ಯತೆಯ ಉಲ್ಲಂಘನೆಗಾಗಿ ದಂಡವನ್ನು ಒದಗಿಸುತ್ತದೆ. ಮತದಾರರ ಪಟ್ಟಿ ಮತ್ತು ವೋಟರ್ ಐಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿರ್ದೇಶನಗಳ ಅಡಿಯಲ್ಲಿ ಭಾರತೀಯ ಚುನಾವಣಾ ಆಯೋಗವು ಈ ಉದ್ದೇಶಕ್ಕಾಗಿ ನೇಮಕಗೊಂಡ ಸರ್ಕಾರಿ ಅಧಿಕಾರಿಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಖಾಸಗಿಯಾಗಿಲ್ಲ ಈ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಏಜೆನ್ಸಿಯನ್ನು ನೇಮಿಸಲಾಗಿಲ್ಲ ಅಥವಾ ಅಧಿಕೃತಗೊಳಿಸಲಾಗಿಲ್ಲ.
ಚುನಾವಣಾ ಆಯೋಗವು ಯಾವುದೇ ಖಾಸಗಿ ಸಂಸ್ಥೆ ಅಥವಾ ಎನ್‌ಜಿಒ ಅಥವಾ ಯಾವುದೇ ವ್ಯಕ್ತಿಯನ್ನು ಮತದಾರರ ಪಟ್ಟಿ-2023 ರ ಪರಿಷ್ಕರಣೆಗಾಗಿ ಮತ್ತು ಮನೆ ಮನೆಗೆ ಸಮೀಕ್ಷೆ ಕಾರ್ಯಕ್ರಮಕ್ಕಾಗಿ ಡೇಟಾ ಸಂಗ್ರಹಿಸಲು ವಹಿಸಿಕೊಟ್ಟಿಲ್ಲ, ತೊಡಗಿಸಿಕೊಂಡಿಲ್ಲ. ಖಾಸಗಿ ವ್ಯಕ್ತಿಗಳು ಮನೆಗೆ ಭೇಟಿ ನೀಡಿದ್ದಲ್ಲಿ ಸಾರ್ವಜನಿಕರ ಮಾಹಿತಿ ನೀಡಬಾರದು.
ಸರ್ಕಾರ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ, ಜಿಲ್ಲೆಯಿಂದ ಅಧಿಕೃತಗೊಳಿಸದ ಯಾವುದೇ ಏಜೆನ್ಸಿಯಿಂದ ಅಂತಹ ಎಲ್ಲಾ ಚಟುವಟಿಕೆಗಳನ್ನು ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ನಿಬಂಧಿಸಲಾಗಿದೆ.
ವೈಯಕ್ತಿಕ ಅಥವಾ ಮತದಾರರ ಡೇಟಾವನ್ನು ಹಸ್ತ ಚಾಲಿತವಾಗಿ ಅಥವಾ ಇನ್ನಿತರ ಮಾಧ್ಯಮದ ಮೂಲಕ ಸುರಕ್ಷಿತವಾಗಿರಿಸಲು ಯಾವುದೇ ರೀತಿಯ ನೇರ ಸಮೀಕ್ಷೆಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ/ಎನ್‌ಜಿಒ/ಖಾಸಗಿ ಸಂಸ್ಥೆ/ಕಂಪನಿ/ಟ್ರಸ್ಟ್ ವಿರುದ್ಧ ಐಪಿಸಿ 188ರ ರಿತ್ಯಾ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಇಂತಹ ಚಟುವಟಿಕೆಗಳ ಬಗ್ಗೆ ಯಾವುದೇ ಕುಂದುಕೊರತೆಗಳಿದ್ದಲ್ಲಿ, ಟೋಲ್ ಫ್ರೀ ನಂಬರ್(08119-1950) ಮೂಲಕ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಚುನಾವಣಾ ವಿಭಾಗಕ್ಕೆ ಪುರಾವೆಗಳೊಂದಿಗೆ ದೂರು ನೀಡಬಹುದಾಗಿದೆ.