News Kannada

ಬೆಂಗಳೂರು ನಗರ

ನಮ್ಮ ದೇಶದಲ್ಲಿ ಅದ್ಭುತವಾದ ಸಂಸ್ಕೃತಿ ಇದೆ: ನಟ ಶಿವರಾಜ್ ಕುಮಾರ್ - 1 min read

ನಮ್ಮ ದೇಶದಲ್ಲಿ ಅದ್ಭುತವಾದ ಸಂಸ್ಕೃತಿ ಇದೆ: ನಟ ಶಿವರಾಜ್ ಕುಮಾರ್

ಬೆಂಗಳೂರು: ದೇಶ ಬಿಡುತ್ತೇನೆಂದು ಹೇಳಿಕೆ ನೀಡಿದ ಆಮೀರ್ ಖಾನ್ ರವರನ್ನು ಕ್ಷಮಿಸಿಸೋಣ ಎಂದು ಸ್ಯಾಂಡಲ್ ವುಡ್ ನಟ ಡಾ.ಶಿವರಾಜ್ ಕುಮಾರ್ ಹೇಳಿದರು.

ಅವರು ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದ್ದ ಬೆಳ್ಳಿಹೆಜ್ಜೆಯಲ್ಲಿ ಮಾತನಾಡಿ, ದೇಶದಲ್ಲಿ ಅಲ್ಲಲ್ಲಿ ಜಾತಿ, ಧರ್ಮದ ಹೊಡೆದಾಟ ನಡೆಯುತ್ತಿವೆ. ಈ ಹಿಂದೆ ಇಂತಹ ವಾತಾವರಣ ಇದ್ದಿರಲಿಲ್ಲ. ನಾವೆಲ್ಲರು ಒಂದಾಗಿದ್ದೆವು. ಇಂತಹ ಘಟನೆಗಳನ್ನು ಮಾಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ವಿಶ್ವದಲ್ಲೇ ಅದ್ಭುತವಾದ ಸಂಸ್ಕೃತಿ ಇದೆ. ಎಲ್ಲಾ ಧರ್ಮವರನ್ನು ಒಗ್ಗೂಡಿಸಿಕೊಂಡು ಹೋಗುವುದು ಈ ಮಣ್ಣಿನ ಸೊಗಡಾಗಿದೆ ಎಂದರು.

ಕಳಸಾ ಬಂಡೂರಿ ಕುರಿತು ಮಾತನಾಡಿದ ಶಿವರಾಜಕುಮಾರ್‌, ನಮ್ಮೊಬ್ಬರಿಂದ ಏನೂ ಆಗುವುದಿಲ್ಲ. ಎಲ್ಲಾ ರಂಗದವರು ಸಹ ಎದ್ದು ನಿಂತಾಗಲಷ್ಟೇ ಇಂಥದ್ದೊಂದು ಹೋರಾಟ ಗೆಲ್ಲುವುದಕ್ಕೆ ಸಾಧ್ಯ. ಚಿತ್ರರಂಗ ಬಂದರೆ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ. ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

See also  ಆರೋಪ ಸಾಬೀತಾದರೆ ನನ್ನೆಲ್ಲಾ ಆಸ್ತಿ ಸರ್ಕಾರಕ್ಕೆ ದಾನ: ಜಮೀರ್ ಅಹ್ಮದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು