News Kannada
Friday, July 01 2022

ಬೆಂಗಳೂರು ನಗರ

ತೃತೀಯ ಶಕ್ತಿ ಪ್ರದರ್ಶನದತ್ತ ಗೌಡರ ಒಲವು? - 1 min read

Photo Credit :

ತೃತೀಯ ಶಕ್ತಿ ಪ್ರದರ್ಶನದತ್ತ ಗೌಡರ ಒಲವು?

ಬೆಂಗಳೂರು: ಜೆಡಿಎಸ್ ನಲ್ಲಿ ಭಿನ್ನಮತ ಬಹಿರಂಗವಾಗುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಜನತಾ ಪರಿವಾರ ಒಂದಾಗುವ ದಿನಗಳ ಸಮೀಪಿಸುತ್ತಿವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.

JD(S) to donate Rs 1cr worth relief material to flood-hit Chennai-1ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ವೇಳೆಗೆ ತೃತೀಯ ಶಕ್ತಿಯ ಧ್ರುವೀಕರಣವಾಗಲಿದೆ ಎಂದು ಹೇಳಿದರು. ಬಿಹಾರ್ ವಿಧಾನ ಸಭಾಚುನಾವಣೆ ಸಂದರ್ಭದಲ್ಲೇ ಪರಿವಾರ ಒಂದಾಗಲು ವೇದಿಕೆ ಸಿದ್ಧಪಡಿಸಲಾಗಿತ್ತು. ಆದರೆ ಮುಲಾಯಂ ಸಿಂಗ್ ಯಾದವ್ ಕೊನೆ ಘಳಿಗೆಯಲ್ಲಿ ಹಿಂದೆ ಸರಿದ ಕಾರಣ ಹಿನ್ನಡೆಯುಂಟಾಯಿತು ಎಂದಿರುವ ಗೌಡರು ಬಿಹಾರ್ ಚುನಾವಣಾ ಫಲಿತಾಂಶ ಮುಲಾಯಂ ಅವರ ಕಣ್ತೆರೆಸಿದೆ. ಮುಂದಿನ ವಿಧಾನ ಸಭಾ ಚುನಾವಣೆ ವೇಳೆಗೆ ಮತ್ತೆ ಜನತಾಪರಿವಾರ ಒಂದಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯಲಿದೆ ಎಂದರು.

ಬಿಹಾರ ಚುನಾವಣೆ ಬಳಿಕ ತೃತೀಯ ಶಕ್ತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರಸ್ಪರ್ಧೆ ನೀಡುವ ಮೂಲಕ ತಮ್ಮ ಪ್ರಾಬಲ್ಯ ಮೆರೆಯಬಹುದೆಂಬ ವಿಶ್ವಾಸ ದೇವೇಗೌಡರಲ್ಲಿ ಮೂಡಿದೆ. ಹೀಗಾಗಿ ಈಗಿನಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಇರಾದೆ ಅವರದ್ದಾಗಿದೆ.

ಆದರೆ ರಾಜ್ಯದ ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇತ್ತೀಚೆಗೆ ಬಹಿರಂಗವಾಗಿದೆ. ಹೀಗಿದ್ದರೂ ನಮ್ಮಲ್ಲಿ ಒಡಕಿಲ್ಲ ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಸಾರುವ ಪ್ರಯತ್ನ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುವುದು ಸದ್ಯದ ಎಂಎಲ್ಸಿ ಚುನಾವಣೆಯಲ್ಲಿ ಸಾಬೀತಾಗಲಿದೆ.

See also  ರಾಜ್ಯದಲ್ಲಿ ಕೊರೋನಾ ಏರಿಕೆ, ಒಂದೇ ದಿನ 707 ಜನರಲ್ಲಿ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು