ಬೆಂಗಳೂರು: ಕರ್ತವ್ಯದಲ್ಲಿದ್ದಾಗಲೇ ಪದಚ್ಯುತಿಗೊಳಿಸಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ.ಅಡಿ ಅವರಿಗೆ ವಿಚಾರಣೆ ನಡೆಸಿದ ಹೈಕೋರ್ಟ್ ಅಡ್ವೋಕೆಟ್ ಜನರಲ್ ಮಧುಸೂದನ್ ಅವರು ಸಭಾಧ್ಯಕ್ಷರ ಅಭಿಪ್ರಾಯ ಆಧರಿಸಿ ಉಪಲೋಕಾಯುಕ್ತರು ಎಂದಿನಂತೆ ತಮ್ಮ ಕೆಲಸ ಮುಂದುವರೆಸಲು ಆಕ್ಷೇಪವಿಲ್ಲ ಎಂದು ಹೇಳಿಕೆ ನೀಡಿರುವುದರಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಿಧಾನಮಂಡಲದಲ್ಲಿ ಪದಚ್ಯುತಿ ನಿರ್ಣಯ ಅಂಗೀಕರಾಗೊಂಡ ನಂತರವೂ ಹೈಕೋಟರ್್ ಆದೇಶದ ಮೂಲಕ ಮತ್ತೆ ಉಪಲೋಕಾಯುಕ್ತರಾಗಿ ಕೆಲಸ ಮುಂದುವರೆಸಿರುವ ಸುಭಾಷ್ ಬಿ.ಅಡಿ ಕಾರ್ಯಕ್ಕೆ ಸರ್ಕಾರ ತಬ್ಬಿಬ್ಬಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅನ್ವಯ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಲೋಕಾಯುಕ್ತ ಭಾಸ್ಕರ್ ರಾವ್ ಮತ್ತು ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಅಂಗೀಕರಿಸಲಾಗಿತ್ತು.
ತಮ್ಮ ವಿರುದ್ಧ ಅಂಗೀಕರಿಸಲಾದ ಪದಚ್ಯುತ ನಿರ್ಣಯವನ್ನು ಪ್ರಶ್ನಿಸಿ ಸುಭಾಷ್ ಬಿ. ಅಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಮುಂದೆ ಅಡ್ವೋಕೆಟ್ ಜನರಲ್ ಮಧುಸೂದನ್ ಅವರು ಸಭಾಧ್ಯಕ್ಷರ ಅಭಿಪ್ರಾಯ ಆಧರಿಸಿ ಉಪಲೋಕಾಯುಕ್ತರು ಎಂದಿನಂತೆ ತಮ್ಮ ಕೆಲಸ ಮುಂದುವರೆಸಲು ಆಕ್ಷೇಪವಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ನ್ಯಾ.ಸುಭಾಷ್ ಅಡಿ ಅವರು ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ