ಬೆಂಗಳೂರು: ಬಿಬಿಎಂ ವ್ಯಾಪ್ತಿಯ ಎಲ್ಲಾ 28 ವಿಧಾನಸಭಾ ವ್ಯಾಪ್ತಿಯಲ್ಲಿ ಇಂದು ಸ್ವಚ್ಛ ಬೆಂಗಳೂರು ಅಭಿಯಾನ ಆರಂಭಿಸಿದೆ.
ಸ್ವಚ್ಛತಾ ಅಭಿಯಾನದಲ್ಲಿ ಬಿಬಿಎಂಪಿ ಮೇಯರ್, ಉಪಮೇಯರ್, ಕಮೀಷನರ್ ಸೇರಿದಂತೆ ಎಲ್ಲಾ ಕಾಪೋರೇಟರ್ ಗಳು, ಅಧಿಕಾರಿಗಳು ಭಾಗವಹಿಸಿದ್ದರು. ಎಲ್ಲರೂ ಕಡ್ಡಾಯವಾಗಿ ತ್ಯಾಜ್ಯವನ್ನ ವಿಂಗಡಿಸಿ ಕಸ ನಿರ್ವಹಣೆ ಮಾಡಬೇಕೆಂದು ತಿಳಿವಳಿಕೆ ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶ.