ಬೆಂಗಳೂರು: ಪ್ರೀತಿಯ ವಿಚಾರ ಹೆತ್ತವರಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದು ಸಹೋದರಿಯರಿಬ್ಬರು ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೊಂಗಸಂದ್ರದ ಬಾಲಾಜಿ ಲೇಔಟ್ನ ನಿವಾಸಿಗಳಾದ ಮೇಘನಾ (22) ಮತ್ತು ರಂಜಿತಾ (20) ಇಬ್ಬರು ಮನೆಯಲ್ಲಿ ನ ಫ್ಯಾನ್ಗೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಶರಣಾಗಿರುವ ಸಹೋದರಿಯರಿಬ್ಬರು ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದ ಹಿನ್ನಲೆಯಲ್ಲಿ ಇಬ್ಬರು ನೇಣು ಹಾಕಿಕೊಂಡು ಸಾವಿನ ಹಾದಿ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.