ಬೆಂಗಳೂರು: ಐಬಿಎಂ ಟೆಕ್ಕಿ ಕುಸುಮಾ ರಾಣಿ ಹತ್ಯೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇಧಿಸಿದ್ದು, ಆರೋಪಿಯನ್ನು ಪೊಲೀಸರು ಹರ್ಯಾಣಾದಲ್ಲಿ ಬಂಧಿಸಿದ್ದಾರೆ.
ಆರೋಪಿ ಸುಖ್ ಬೀರ್ ಸಿಂಗ್ ಆರೋಪಿ. ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡು ಆರು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು ತಮ್ಮ ಚಾಣಕ್ಷತನದಿಂದ ಅತಿ ಶೀಘ್ರದಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಸುಖ್ ಬೀರ್ ಸಿಂಗ್ ನನ್ನು ಹರಿಯಾಣದ ಗುರುಗಾವ್ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ.
ಆರೋಪಿ ಸುಖ್ ಬೀರ್ ಸಿಂಗ್ ಹಾಗೂ ಕುಸುಮ ರಾಣಿ ಫೇಸ್ ಬುಕ್ ನಲ್ಲಿ ಪರಿಚಿತಳಾಗಿದ್ದು, ಆಕೆಯ ಬಳಿ ಇದ್ದ ನಗ ನಾಣ್ಯಗಳನ್ನು ದೋಚುವ ಉದ್ದೇಶದಿಂದ ಜನವರಿ 19 ರಂದು ಮಧ್ಯಾಹ್ನ ಕುಸುಮ ರಾಣಿ ವಾಸವಾಗಿದ್ದ ಫ್ಲಾಟ್ ಗೆ ಬಂದು ಕೊಲೆ ಮಾಡಿ ಆಕೆಯ ಬಳಿ ಇದ್ದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳನ್ನು ಚೆಕ್ ಬುಕ್ ಗಳನ್ನು ಹಾಗೂ ಮೊಬೈಲ್ ಫೋನ್ ಅನ್ನು ದೋಚಿಕೊಂಡು ಹೋಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಎಸ್.ಮೇಘರಿಖ್, ಐಪಿಎಸ್ ಹಾಗೂ ಪೂರ್ವ ವಲಯದ ಆಪರ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್, ಐಪಿಎಸ್ ಮಾರ್ಗದರ್ಶನದಲ್ಲಿ ಆಗ್ನೇಯ ವಿಭಾಗದ ಡಿ.ಸಿ.ಪಿ ಡಾ.ಬೋರಲಿಂಗಯ್ಯ, ಎಂ.ಬಿ. ಐಪಿಎಸ್ ರವರ ನೇತೃತ್ವದಲ್ಲಿ ಏರ್ ಪೋರ್ಟ್ ಉಪ ವಿಭಾಗದ ಎ.ಸಿ.ಪಿ ಎಸ್.ಎಚ್. ದುಗ್ಗಪ್ಪ, ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಎಂ.ಎಂ. ಪ್ರಶಾಂತ್ ಬಾಬು, ನರಸಿಂಹ ಮೂರ್ತಿರವರನ್ನೊಳಗೊಂಡ ತಂಡ ಆರೊಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ