ಬೆಂಗಳೂರು: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, 175 ತಾಲೂಕು ಪಂಚಾಯ್ತಿಯ ಸ್ಥಾನಗಳಲ್ಲಿ 39 ಸ್ಥಾನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ, 31ರಲ್ಲಿ ಬಿಜೆಪಿ, 04 ಸ್ಥಾನಗಳಲ್ಲಿ ಜೆಡಿಎಸ್ ಹಾಗೂ 03 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಒಟ್ಟು 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಫಲಿತಾಂಶ ಹೊರ ಬೀಳುತ್ತಿದ್ದು, ನಿರೀಕ್ಷೆಯಂತೆಯೇ ಆಡಳಿತಾ ರೂಢ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಒಟ್ಟು 30 ಜಿಲ್ಲೆಗಳ ಪೈಕಿ ಕಾಂಗ್ರೆಸ್ 13 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 10 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ಬಿಜೆಪಿ ಪಾಲಾಗಿದೆ. 25 ಕ್ಷೇತ್ರಗಳಲ್ಲಿ 19ರಲ್ಲಿ ಬಿಜೆಪಿ ಗೆಲುವು ಕಂಡಿದೆ. ತುಮಕೂರು ತಾಲ್ಲೂಕು ಪಂಚಾಯತ್ ನ 30 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 1 ಮತ್ತು ಜೆಡಿಎಸ್ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ತುಮಕೂರಿನ ಶಿರಾ ತಾಲೂಕಿನಲ್ಲಿ ಕೂಡ ಬಿಜೆಪಿ ಗೆಲುವು ಕಂಡಿದೆ.
ಹಾಸನ ಜಿಲ್ಲಾ ಪಂಚಾಯಿತಿ ಚುನಾವಣಾ ಸಮರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್ ಮುನ್ನಡೆ ಸಾಧಿಸಿದ್ದು, ಹಾಸನದ ಒಟ್ಟು 40 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಆಗ್ರಸ್ಥಾನದಲ್ಲಿದೆ. ಇನ್ನು ಜೆಡಿಎಸ್ ತೀವ್ರ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಪಕ್ಷ 13 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಬಿಜೆಪಿ ಕೇವಲ 2 ಸ್ಥಾನಗಳನ್ನು ಗಳಿಸುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಜೆಡಿಎಸ್ ಪಕ್ಷದ ತೀವ್ರ ಪೈಪೋಟಿ ನಡುವೆಯೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಮೈಸೂರಿನ ಒಟ್ಟು 49 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ತೀವ್ರ ಪೈಪೋಚಿ ನೀಡಿದ ಜೆಡಿಎಸ್ ಒಟ್ಟು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಯಾದಗಿರಿಯ ಒಟ್ಟು 24 ಕ್ಷೇತ್ರಗಳ ಪೈಕಿ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 9 ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉತ್ತರ ಕನ್ನಡದ ಒಟ್ಟು 39 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬರೊಬ್ಬರಿ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 9, ಜೆಡಿಎಸ್ 2, ಪಕ್ಷೇತರರು 2 ಕ್ಷೇತ್ರಗಳಲ್ಲಿ ಸಾಧಿಸಿದ್ದಾರೆ.
ದಾವಣಗೆರೆಯ ಒಟ್ಟು 36 ಸ್ಥಾನಗಳ ಪೈಕಿ ಕಾಂಗ್ರೆಸ್ 20 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 11 ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಗದಗ ಜಿಲ್ಲಾ ಪಂಚಾಯಿತಿಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಒಟ್ಟು 19 ಸ್ಥಾನಗಳಲ್ಲಿ ಕಾಂಗ್ರೆಸ್ 10 ರಲ್ಲಿ ಗೆಲುವು ಸಾಧಿಸಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರು:
ಬೆಂಗಳೂರು ನಗರ:
ಶಾಂತಿಪುರ – ಕಾಂಗ್ರೆಸ್ – ಪಾರಿಜಾತ ದೊರೆಸ್ವಾಮಿ
ಬಾಗಲೂರು – ಕಾಂಗ್ರೆಸ್ – ಕೆ. ರಮೇಶ್
ಯಮರೇ – ಬಿಜೆಪಿ – ಪವಿತ್ರ ಜಯಪ್ರಕಾಶ್
ಸರ್ಜಾಪುರ – ಬಿಜೆಪಿ – ಮುನಿರಾಜು
ಮಂಡೂರು – ಕಾಂಗ್ರೆಸ್ – ಕೆಂಪರಾಜು
ಅವಲಹಳ್ಳಿ – ಕಾಂಗ್ರೆಸ್ – ಜಯರಾಂ
ಹೆಸರಘಟ್ಟ – ಬಿಜೆಪಿ -ಎಂ.ಬಿ.ಕೃಷ್ಣಯ್ಯ
ದೊಮ್ಮಸಂದ್ರ – ಬಿಜೆಪಿ – ವಾತ್ಸಲ್ಯ ಲಕ್ಷ್ಮಿನಾರಾಯಣ
ನೆರಳೂರು – ಬಿಜೆಪಿ – ನಾಗೇಶ್ ರೆಡ್ಡಿ
ಬಿದರುಗುಪ್ಪೆ – ಬಿಜೆಪಿ – ವಿಜಯ ಕೃಷ್ಣ
ಚಿತ್ರದುರ್ಗ:
ಹಾನಗಲ್ — ಕಾಂಗ್ರೆಸ್ – ಮುಂಡರಗಿ ನಾಗರಾಜ್
ಬಿಜಿ ಕೆರೆ – ಕಾಂಗ್ರೆಸ್ – ಡಾ. ಯೋಗೇಶ್ ಬಾಬು
ರಾಮಪುರ – ಕಾಂಗ್ರೆಸ್ – ಸುಶೀಲಮ್ಮ
ದೊಡ್ಡುಳ್ಳಾರ್ತಿ – ಬಿಜೆಪಿ& – ಗೌರಮ್ಮ
ಲಕ್ಷ್ಮಿಸಾಗರ – ಕಾಂಗ್ರೆಸ್ – ಕೃಷ್ಣಮೂರ್ತಿ
ದೊಡ್ಡಸಿದ್ಧವನಹಳ್ಳಿ – ಕಾಂಗ್ರೆಸ್ – ಸೌಭಾಗ್ಯ ಬಸವರಾಜನ್
ಭರಮಸಾಗರದಲ್ಲಿ – ಬಿಜೆಪಿ – ಡಿ.ವಿ.ಶರಣಪ್ಪ
ಗುಡ್ಡದರಂಗವನಹಳ್ಳಿ – ಬಿಜೆಪಿ – ಗುರುಮೂರ್ತಿ
ಹಿರೇಗುಂಟನೂರು& – ಬಿಜೆಪಿ -ಬಂಡಾಯ ಅಭ್ಯರ್ಥಿ – ಜಯಪ್ರಭ
ಶಿವಮೊಗ್ಗ:
ತೀರ್ಥಹಳ್ಳಿ – ಬಿಜೆಪಿ – ಅಪೂರ್ವ
ಆನವೇರಿ – ಬಿಜೆಪಿ – ವೀರಭದ್ರಪ್ಪ ಪೂಜಾರಿ
ಕುಪ್ಪಳ್ಳಿ – ಕಾಂಗ್ರೆಸ್ – ಕಲ್ಪನಾ ಪದ್ಮನಾಭ್
ರಿಪ್ಪನ್ಪೇಟೆ – ಕಾಂಗ್ರೆಸ್ – ಶ್ವೇತಾ ಆರ್. ಬಂಡಿ
ಹಾವಿನಹಳ್ಳಿ – ಕಾಂಗ್ರೆಸ್ – ಕಾಗೋಡು ಅಣ್ಣಾಜಿ – ಸ್ಪೀಕರ್ ಕಾಗೋಡು ತಿಮ್ಮಪ್ಪ ಸಹೋದರ
ಗಾಜನೂರು – ಬಿಜೆಪಿ – ಹೇಮಾವತಿ ಶಿವನಂಜಪ್ಪ
ಕೂಡ್ಲಿಗೆರೆ – ಜೆಡಿಎಸ್ – ಗೀತಾ ಜಗದೀಶ್
ಆನಂದಪುರ – ಕಾಂಗ್ರೆಸ್ – ಅನಿತಾ ಕುಮಾರಿ
ಆನವಟ್ಟಿ – ಜೆಡಿಎಸ್ – ಕೊಟ್ಟಿಗೆ ವೀರೇಶ್
ಹಾರನಹಳ್ಳಿ – ಬಿಜೆಪಿ – ಸೌಮ್ಯ ಭೋಜನಾಯಕ
ಮಡಿಕೇರಿ:
ಸಂಪಾಜೆ – ಬಿಜೆಪಿ – ಕೆಕೆ ಕುಮಾರ್
ನಾಪೋಕ್ಲೂ – ಬಿಜೆಪಿ – ಮುರಳಿದರ್
ಕಾಂತೂರು ಮೂರ್ನಾಡ್ – ಬಿಜಿಪಿ – ಕಲಾವತಿ
ಚಯ್ಯಂಡಾಣಿ – ಬಿಜೆಪಿ – ಕಿರಣ್ ಕಾರ್ಯಪ್ಪ
ಕಡಗದಾಳು – ಬಿಜೆಪಿ – ಹರೀಶ್
ಮಕ್ಕಂದೂರು – ಬಿಜೆಪಿ – ಪದ್ಮಾವತಿ
ಬಾಗಮಂಡಲ – ಬಿಜೆಪಿ& – ಕವಿತಾ ಪ್ರಭಾಕರ್
ಧಾರವಾಡ:
ಗರಗ – ಬಿಜೆಪಿ – ರತ್ನಾಕರ್ ಪಾಟೀಲ್
ಮುಗದ – ಬಿಜೆಪಿ -ಭಾವನಾ
ಗಳಗಿ – ಬಿಜೆಪಿ – ಅಣ್ಣಪ್ಪ
ತಬಕದಹೊನ್ನಳ್ಳಿ – ಬಿಜೆಪಿ – ಮಂಜವ್ವ
ದೇವಿಕೊಪ್ಪ – ಕಾಂಗ್ರೆಸ್ – ವಿದ್ಯಾಶಂಕರ್
ಮಿಶ್ರಿಕೋಟಿ – ಕಾಂಗ್ರೆಸ್ – ಈರವ್ವ
ಮೊಗದ – ಬಿಜೆಪಿ – ಭಾವನಾ ಬೆಲೂರು
ಉಪ್ಪಿನಬೆಟಗೇರಿ – ಕಾಂಗ್ರೆಸ್ – ಕಲ್ಲಪ್ಪ ಪುಡಕಲಪಟ್ಟಿ
ನರೇಂದ್ರ – ಕಾಂಗ್ರೆಸ್ – ಕರೆಪ್ಪ
ಹೆಬ್ಬಳ್ಳಿ – ಬಿಜೆಪಿ – ಯೋಗೀಶ್ ಗೌಡ
ಹೊನ್ನಳ್ಳಿ – ಬಿಜೆಪಿ – ಮಂಜುಳಾ
ನಿಗದಿ – ಕಾಂಗ್ರೆಸ್ – ನಿಂಗಪ್ಪ ಘಾಟಿನ್
ಚಾಮರಾಜನಗರ:
ಲೋಕನಹಳ್ಳಿ – ಕಾಂಗ್ರೆಸ್ – ಮರಗಡಗಿ
ಕುಂಕೂರು – ಬಿಜೆಪಿ – ಕಮಲ್
ಮಾರ್ತಳ್ಳಿ – ಬಿಜೆಪಿ – ಈಶರತ್ತ ಬಾನು
ಬಾಂಡಳ್ಳಿ – ಕಾಂಗ್ರೆಸ್ – ಜಿ. ಲೇಖಾ
ಹಾಸನ:
ಹನಿಬಾಳು – ಕಾಂಗ್ರೆಸ್ – ಬೈರಮುಡಿ ಚಂದ್ರು
ಹಲೇಕೋಟೆ – ಜೆಡಿಎಸ್ – ಭವಾನಿ ರೇವಣ್ಣ, ಎಚ್ ಡಿ ರೇವಣ್ಣ ಪತ್ನಿ
ಬೆಳಗೋಡಿ – ಜೆಡಿಎಸ್ – ಚಂಚಲಕುಮಾರಸ್ವಾಮಿ – ಹೆಚ್ಕೆ ಕುಮಾರಸ್ವಾಮಿ ಪತ್ನಿ
ಕೊಪ್ಪಳ:
ಹಿಟ್ನಾಳ್ – ಕಾಂಗ್ರೆಸ್ – ಬೀನಾ ಗೌಸನಾ
ಲೇಬಗೇರಾ – ಬಿಜೆಪಿ – ಗವಿಸಿದ್ದಪ್ಪ ಕರಡಿ
ಗೊಂಡಬಾಳ – ಕಾಂಗ್ರೆಸ್ – ಗುಳಪ್ಪ ಹಲಗೇರಿ
ಈರಕಲ್ಗಡ – ಬಿಜೆಪಿ – ರಾಮಪ್ಪ ಚೌಡತ್ತಿ
ಉಡುಪಿ:
ಕೋಟ- ಬಿಜೆಪಿ- ರಾಘವೇಂದ್ರ ಕಾಂಚನ್
ಮಂದಾರ್ತಿ- ಬಿಜೆಪಿ- ಪ್ರತಾಪ್ ಹೆಗ್ಡೆ
ಕಾವ್ರಾಡಿ- ಕಾಂಗ್ರೆಸ್- ಜ್ಯೋತಿ
ಕಲ್ಯಾಣಪುರ- ಕಾಂಗ್ರೆಸ್- ಜನಾರ್ದನ ತೋನ್ಸೆ
ಶಿರೂರು- ಬಿಜೆಪಿ- ಸುರೇಶ್
ಬೈಂದೂರು- ಬಿಜೆಪಿ- ಶಂಕರ ಪೂಜಾರಿ
ಕಂಬದಕೋಣೆ- ಕಾಂಗ್ರೆಸ್- ಗೌರಿ
ಪಡುಬಿದ್ರೆ- ಬಿಜೆಪಿ- ಶಶಿಕಾಂತ್
ಹೆಬ್ರಿ- ಬಿಜೆಪಿ- ಜ್ಯೋತಿ
ಬೆಳ್ಮಣ್ಣು- ಬಿಜೆಪಿ- ರೇಷ್ಮಾ
ಬೈಲೂರು- ಬಿಜೆಪಿ- ಸುಮಿತ್
ಮೀಯಾರು- ಬಿಜೆಪಿ- ದಿವ್ಯ
ಬಜಗೋಳಿ- ಬಿಜೆಪಿ- ಉದಯ ಕೋಟ್ಯಾನ್
ತ್ರಾಸಿ- ಬಿಜೆಪಿ- ಶೋಭಾ
ವಂಡ್ಸೆ- ಬಿಜೆಪಿ- &ಬಾಬು ಶೆಟ್ಟಿ
ಕೋಟೇಶ್ವರ- ಬಿಜೆಪಿ- ಲಕ್ಷ್ಮೀ
ಬೀಜಾಡಿ- ಬಿಜೆಪಿ- ಲತಾ
ಸಿದ್ದಾಪುರ- ಬಿಜೆಪಿ- ತಾರಾನಾಥ ಶೆಟ್ಟಿ
ಹಾಲಾಡಿ- ಬಿಜೆಪಿ- ಸುಪ್ರೀತಾ
ಪೆರ್ಡೂರು- ಕಾಂಗ್ರೆಸ್- ಸುಧಾಕರ್ ಶೆಟ್ಟಿ
ಬ್ರಹ್ಮಾವರ- ಬಿಜೆಪಿ- ಶೀಲಾ ಶೆಟ್ಟಿ
ಉದ್ಯಾವರ- ಬಿಜೆಪಿ- ದಿನಕರ್
ಹಿರಿಯಡ್ಕ- ಕಾಂಗ್ರೆಸ್- ಚಂದ್ರಿಕಾ
ಕುರ್ಕಾಲು- ಬಿಜೆಪಿ- ಗೀತಾಂಜಲಿ
ಶಿರ್ವ- ಕಾಂಗ್ರೆಸ್- ವಿಲ್ಸನ್
ಎಲ್ಲೂರು- ಬಿಜೆಪಿ- ಶಿಲ್ಪಾ
ಜಿಲ್ಲಾ ಪಂಚಾಯತ್ ಚುನಾವಣಾ ಫಲಿತಾಂಶ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ 21 ಸ್ಥಾನಗಳ ಪೈಕಿ 1 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ
ಹಾಸನ ಜಿಲ್ಲಾ ಪಂಚಾಯ್ತಿಯ 40 ಸ್ಥಾನಗಳ ಪೈಕಿ 1 ಸ್ಥಾನದಲ್ಲಿ ಜೆಡಿಎಸ್ ಗೆ ಮುನ್ನಡೆ
ಮೈಸೂರಿನ 49 ಸ್ಥಾನಗಳ ಪೈಕಿ 23ರಲ್ಲಿ ಕಾಂಗ್ರೆಸ್, 08 ರಲ್ಲಿ ಬಿಜೆಪಿ, 18ಸ್ಥಾನಗಳಲ್ಲಿ ಜೆಡಿಎಸ್ ಮುನ್ನಡೆ
ಉಡುಪಿ ಜಿಲ್ಲಾ ಪಂಚಾಯ್ತಿಯ 26 ಸ್ಥಾನಗಳಲ್ಲಿ 3ಸ್ಥಾನಗಳಲ್ಲಿ ಕಾಂಗ್ರೆಸ್, 10 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿಯ 36 ಸ್ಥಾನಗಳಲ್ಲಿ 8 ಕಾಂಗ್ರೆಸ್, 6 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಬಳ್ಳಾರಿ ಜಿಲ್ಲಾ ಪಂಚಾಯ್ತಿಯ 40 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್, 03 ಸ್ಥಾನಗಳಲ್ಲಿ ಬಿಜೆಪಿ, ಪಕ್ಷೇತರ 01 ಸ್ಥಾನಗಳಲ್ಲಿ ಜಯ.
ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿಯ 39 ಸ್ಥಾನಗಳಲ್ಲಿ 23 ಸ್ಥಾನಗಳಲ್ಲಿ ಕಾಂಗ್ರೆಸ್, 05 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿದೆ.
ಹಾವೇರಿ ಜಿಲ್ಲಾ ಪಂಚಾಯ್ತಿಯ 39 ಸ್ಥಾನಗಳಲ್ಲಿ 13 ಸ್ಥಾನಗಳಲ್ಲಿ ಕಾಂಗ್ರೆಸ್, 4 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು.
ಗದಗ ಜಿಲ್ಲಾ ಪಂಚಾಯ್ತಿಯ 19 ಸ್ಥಾನಗಳಲ್ಲಿ 9 ಸ್ಥಾನಗಳಲ್ಲಿ ಕಾಂಗ್ರೆಸ್, 05 ಸ್ಥಾನಗಳಲ್ಲಿ ಬಿಜೆಪಿಗೆ ಜಯ.
ಉಡುಪಿ ಜಿಲ್ಲಾ ಪಂಚಾಯ್ತಿಯ 26 ಸ್ಥಾನಗಳಲ್ಲಿ 3ಸ್ಥಾನಗಳಲ್ಲಿ ಕಾಂಗ್ರೆಸ್, 10 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಯಾದಗಿರಿ ಜಿಲ್ಲಾ ಪಂಚಾಯ್ತಿಯ 24 ಸ್ಥಾನಗಳಲ್ಲಿ 9 ಸ್ಥಾನಗಳಲ್ಲಿ ಕಾಂಗ್ರೆಸ್, 11ರಲ್ಲಿ ಬಿಜೆಪಿ ಹಾಗೂ 04 ಸ್ಥಾನಗಳಲ್ಲಿ ಜೆಡಿಎಸ್ ಮುನ್ನಡೆ
ಮಾಗಡಿ ಜಿಪಂ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜಿರಿ ಗೆಲುವು, ಗುಬ್ಬಿರಂಗನವಳ್ಳಿ ಜಿಪಂ ಕ್ಷೇತ್ರದಲ್ಲಿ ಬಿಜಪಿಗೆ ಗೆಲುವು.
ಬಳ್ಳಾರಿ ಜಿಲ್ಲಾ ಪಂಚಾಯ್ತಿಯ 40 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್, 03 ಸ್ಥಾನಗಳಲ್ಲಿ ಬಿಜೆಪಿ, ಪಕ್ಷೇತರ 01 ಸ್ಥಾನಗಳಲ್ಲಿ ಜಯ.
ಬೆಂಗಳೂರು ನಗರ ಜಿಲ್ಲೆಯ ಶಾಂತಿಪುರ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ 36 ಸ್ಥಾನಗಳಲ್ಲಿ ಕಾಂಗ್ರೆಸ್ 04 ಸ್ಥಾನಗಳಲ್ಲಿ, ಬಿಜೆಪಿ 06 ಸ್ಥಾನಗಳಲ್ಲಿ ಮುನ್ನಡೆ
ತಾಲೂಕು ಪಂಚಾಯತ್ ಚುನಾವಣಾ ಫಲಿತಾಂಶ:
ಬೆಂಗಳೂರು ಉತ್ತರ ತಾಲೂಕಿನ ಹುರುಳಿಚಿಕ್ಕನಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್.ವಿ.ಪ್ರಕಾಶ್ ಜಯಗಳಿಸಿದ್ದಾರೆ. ಅವಧಿ ಮುಕ್ತಾಯಗೊಳ್ಳದಿರುವ ಕಾರಣ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆ ನಡೆಸಿಲ್ಲ.
Live Update:
ZP/TP polls: Click here for results
http://www.newskarnataka.com/mangalore/zptp-polls-click-here-for-results
http://www.newskarnataka.com/bangalore/zp-tp-election-results-today
http://www.newskarnataka.com/bangalore/live-updates-of-zptp-elections