News Kannada
Monday, September 26 2022

ಬೆಂಗಳೂರು ನಗರ

ಆಸ್ಪತ್ರೆ ನಿರ್ಲಕ್ಷ: ತುರ್ತು ಚಿಕಿತ್ಸೆ ಸಿಗದೆ ನರಳಾಡಿದ ಯುವಕ - 1 min read

Photo Credit :

ಆಸ್ಪತ್ರೆ ನಿರ್ಲಕ್ಷ: ತುರ್ತು ಚಿಕಿತ್ಸೆ ಸಿಗದೆ ನರಳಾಡಿದ ಯುವಕ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಕಾಣಿಸಿದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಕರಣದಲ್ಲಿ ನಿಮ್ಮನ್ನು ಸಾಕ್ಷಿಯಾಗಿಸುವುದಿಲ್ಲ ಎನ್ನುವ ಜಾಹೀರಾತು ಕಂಡರೂ ಅಪಘಾತಕ್ಕೆ ಒಳಗಾಗಿ ಗಾಯಗೊಂಡ ವ್ಯಕ್ತಿಯೊಬ್ಬರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ನರಳಾಡಿದ ಘಟನೆ ನಗರದಲ್ಲಿ ನಡೆದಿದೆ.

ಕಿಶೋರ್ ಎಂಬಾತ(21) ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಹೊಸಕೋಟೆ ತಾಲೂಕು ಬಳಿ ಆನಗೊಂಡನಹಳ್ಳಿ ಸಮೀಪ ರಸ್ತೆ ಅಪಘಾತ ಸಂಭವಿಸಿ ತಲೆ, ಕೈ ಕಾಲುಗಳಿಗೆ ತೀವ್ರವಾಗಿ ಪೆಟ್ಟು ಬಿದ್ದು ನರಳಾಡುತ್ತಿದ್ದ ಕುರಿತು ಸ್ಥಳೀಯರು ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಆಗಮಿಸಿದ ಬೀಟ್ ಪೊಲೀಸರು ಗಾಯಗೊಂಡು ನರಳಾಡುತ್ತಿದ್ದ ಕಿಶೋರ್ ನನ್ನು ವೈಟ್ ಫೀಲ್ಡ್ ಸಮೀಪದ ವೈದೇಹಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. ಆದರೆ ರೋಗಿಯ ಹೆಸರು ಸೇರಿದಂತೆ ಯಾವುದೇ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ವೈದ್ಯರು ಬೆಳಗ್ಗೆ 9 ಗಂಟೆಯವರೆಗೂ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ನ೦ತರ ಪೊಲೀಸರು ವೈದೇಹಿ ಆಸ್ಪತ್ರೆಯಿ೦ದ ಬೆಳಗ್ಗೆ 11 ಗ೦ಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಿ.ಟಿ. ಸ್ಕ್ಯಾನ್ ಯ೦ತ್ರವಿಲ್ಲ ಎ೦ದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಗಾಯಾಳುವನ್ನು ನಿಮಾನ್ಸ್‌ಗೆ ಕಳುಹಿಸಿದ್ದಾರೆ. ನೋವಿನಿ೦ದ ನರಳುತ್ತಿದ್ದ ಕಿಶೋರ್‌ನನ್ನು ಮಧ್ಯಾಹ್ನ 3ಕ್ಕೆ ನಿಮಾನ್ಸ್‌ಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅಲ್ಲಿಯವರೆಗೆ ಕಿಶೋರ್‌ಗೆ ವೈದೇಹಿ ಹಾಗೂ ವಿಕ್ಟೋರಿಯಾ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಿಲ್ಲವೆಂದು ಆರೋಪಿಸಲಾಗಿದೆ.

ಅಪಘಾತಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡದೆ ಸತಾಯಿಸಿದ ಆಸ್ಪತ್ರೆಗಳ ಕುರಿತು ಇಂದು ಸಂಜೆಯ ಒಳಗೆ ವರದಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ. ಸಂಜಯ್‍ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ತಿಲಕ್‍ ಹಾಗೂ ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ವಿಮಲಾ ಪಾಟೀಲ್‍ಗೆ ಆದೇಶ ನೀಡಿರುವ ಆರೋಗ್ಯ ಸಚಿವರು ಸಂಜೆಯೊಳಗೆ ಒಟ್ಟಾರೆ ಪ್ರಕರಣದ ವರದಿ ಸಿದ್ಧಪಡಿಸಿ ನೀಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ವಿಪರ್ಯಾಸವೆಂದರೆ ಈ ರೀತಿಯ ಅಪಘಾತಗಳು ಸಂಭವಿಸಿದಾಗ ರೋಗಿಯ ಪೂರ್ವಾಪರ ಹಾಗೂ ಹಣ ನೋಡದೆ ಚಿಕಿತ್ಸೆ ನೀಡಬೇಕು ಎಂಬ ಕಾರಣದಿಂದ ಸರಕಾರ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿ ವಾರ ಕಳೆಯುವ ಮುನ್ನವೇ ಯೋಜನೆಯ ಫಲ ದೊರೆಯದೆ ಗಾಯಾಳು ಒಬ್ಬ 15 ತಾಸುಗಳ ಕಾಲ ಚಿಕಿತ್ಸೆ ದೊರೆಯದೆ ನರಳಾಡುವಂತಾಯಿತು.

See also  ಅಮಿತ್ ಶಾ, ಯಡಿಯೂರಪ್ಪ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು