ಬೆಂಗಳೂರು: ನಗ್ರೋಟಾದಲ್ಲಿ ನಡೆದ ಉಗ್ರರ ವಿರುದ್ಧದ ಗುಂಡಿನ ಕಾಳಗದಲ್ಲಿ ಕರ್ನಾಟಕದ ಮೇಜರ್ ಸೇರಿ ಏಳು ಮಂದಿ ಹುತಾತ್ಮರಾಗಿದ್ದಾರೆ.
ಮೇಜರ್ ಅಕ್ಷಯ್ ಗಿರೀಶ್ ಕುಮಾರ್ (31) ಬೆಂಗಳೂರು ಮೂಲದವರು. ಪೊಲೀಸ್ ಯೂನಿಫಾರ್ಮ್ನಮಲ್ಲಿ ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಭಾರೀ ಪ್ರಮಾಣದಲ್ಲಿ ಶಸ್ತ್ರ ಸಜ್ಜಿತರಾಗಿದ್ದ ಉಗ್ರರು ನಗ್ರೋಟಾ ರೆಜಿಮೆಂಟ್ ಮೇಲೆ ದಾಳಿ ಮಾಡಿದ್ದರು.
ಅಕ್ಷಯ್ ಗಿರೀಶ್ ಕುಮಾರ್ ಜವಹರ್ ಲಾಲ್ ನೆಹರು ವಿವಿ ಪದವೀಧರ, ನಿವೃತ್ತ ಐಎಎಫ್ ಫೈಲಟ್ ಗಿರೀಶ್ ಕುಮಾರ್ ಹಾಗೂ ಮೇಘನಾ ಗಿರೀಶ್ ಅವರ ಪುತ್ರ, ನಾಲ್ಕು ವರ್ಷದ ಕೆಳಗೆ ಅಕ್ಷಯ್ ತಮ್ಮ ಸ್ನೇಹಿತೆ ಸಂಗೀತಾ ರವೀಂದ್ರನ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಮೂರು ವರ್ಷದ ಮಗಳಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯ ಸಾದಹಳ್ಳಿ ಗೇಟ್ ಬಳಿ ಝೆಡ್ ಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ಅಕ್ಷಯ್ ಪೋಷಕರು ವಾಸವಿದ್ದರು. ಕೊರಮಂಗಲದಲ್ಲಿರುವ ತಮ್ಮ ಫ್ಲಾಟ್ಅನ್ನು ಹಲವು ತಿಂಗಳ ಹಿಂದೆ ಬೇರೊಬ್ಬರಿಗೆ ಬಾಡಿಗೆ ನೀಡಿದ್ದರು ಎಂದು ತಿಳಿದುಬಂದಿದೆ. ಅಕ್ಷಯ್ ತಮ್ಮ ಪತ್ನಿಯೊಂದಿಗೆ ಕಾಶ್ಮೀರದಲ್ಲಿರುವ ಆರ್ಮಿ ಕ್ವಾರ್ಟಸ್ ನಲ್ಲಿ ವಾಸವಾಗಿದ್ದರು.