ಕಲಬುರ್ಗಿ: ಅಕ್ರಮವಾಗಿ ಕಾರಿನಲ್ಲಿ 2000 ರುಪಾಯಿ ಮುಖಬೆಲೆಯ 25 ಲಕ್ಷ ರುಪಾಯಿಯನ್ನು ಸಾಗಾಟ ಮಾಡುತ್ತಿದ್ದು, ಗುರುವಾರ ಕಲಬುರ್ಗಿ ಹೊರವಲಯದ ನಾಗನಹಳ್ಳಿ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ.
ರಾಯಚೂರಿನ ವಾಸವಿ ನಗರ ನಿವಾಸಿ ಸೂರಜ್ ಸಿಂಗ್(32) ಎಂಬವರು ದಾಖಲೆ ಇಲ್ಲದ 25 ಲಕ್ಷ ರುಪಾಯಿ ಸಾಗಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರಿನಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ಜಪ್ತಿ ಮಾಡಿ, ಆರೋಪಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.