ಬೆಂಗಳೂರು: ಇಸ್ಕಾನ್ ಸನ್ಯಾಸಿ ಕುಲಶೇಖರ ಚೈತನ್ಯ ದಾಸ ಅವರ ಮೇಲಿದ್ದ ಅತ್ಯಾಚಾರ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಅರ್ಜಿಯನ್ನು ಪುರಸ್ಕರಿಸಿದ್ದು, ಕುಲಶೇಖರ ಚೈತನ್ಯ ದಾಸ ಅವರು ‘ನನ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದರು.
ನ್ಯಾಯಮೂರ್ತಿಗಳು ದೂರು ವಜಾಗೊಳಿಸಿದ್ದು, ಪ್ರಕರಣ ಹುರುಳಿಲ್ಲದ ಆರೋಪಗಳಿಂದ ಕೂಡಿದ್ದು, ಆರೋಪ ದಾಖಲಿಸಿದ ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದ್ದು, ಮಾತ್ರವಲ್ಲ ಪೊಲೀಸರು ಕೂಡಾ ಈಗಾಗಲೇ ಆಕೆ ಸಲ್ಲಿಸಿದ್ದ ದೂರು ಸುಳ್ಳು ಎಂದು ಬಿ ರಿಪೋರ್ಟ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ದೂರಿನ ವಿವರ: ಕುಲಶೇಖರ ಚೈತನ್ಯ ದಾಸ ಅವರ ವಿರುದ್ಧ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಅತ್ಯಾಚಾರ ಆರೋಪದ ಖಾಸಗಿ ದೂರನ್ನು 7ನೇ ಎಸಿಎಂಎಂ ಕೋರ್ಟ್ನಲ್ಲಿ ದಾಖಲಿಸಿದ್ದರು. ಕುಲಶೇಖರ ಚೈತನ್ಯ ದಾಸ ಇದನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.