ಮೈಸೂರು: ಸಿಎಂ ಸಿದ್ದರಾಮಯ್ಯ ಯಾವಾಗಲೋ ಕುರ್ಚಿಯನ್ನ ಖಾಲಿ ಮಾಡಬೇಕಾಗಿತು, ಕುರ್ಚಿ ಉಳಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನ, ಮದ್ದುಗಳನ್ನ ಕಳೆದ ಒಂದುವರೆ ವರ್ಷದಿಂದ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮೈಸೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಹೇಳಿಕೆಯನ್ನ ಸಮರ್ಥಿಸಿಕೊಂಡರು.
ಹೈಕಮಾಂಡ್ ಗೆ ಸಿಎಂ ಸಿದ್ದರಾಮಯ್ಯ ಸ್ಥಾನ ಉಳಿಸಿಕೊಳ್ಳಲು ಒಂದು ಸಾವಿರ ಕೋಟಿ ಹಣ ನೀಡಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಯಾವಗಲೋ ಸಿಎಂ ಕುರ್ಚಿಯನ್ನ ಖಾಲಿ ಮಾಡಬೇಕಿತ್ತು. ಹಲವಾರು ಪ್ರಯತ್ನಗಳನ್ನ, ಬೆದರಿಕೆ ತಂತ್ರಗಳನ್ನ ಮಾಡುವ ಮೂಲಕ ಜೊತೆಗೆ ಕುರ್ಚಿ ಉಳಿಸಿಕೊಳ್ಳಲು ಕಳೆದ ಒಂದುವರೆ ವರ್ಷದಿಂದ ಹಲವಾರು ಮದ್ದುಗಳನ್ನ ಮಾಡಿದ್ದು, ಅದರಲ್ಲಿ ಹಣ ನೀಡಿದ್ದು ಒಂದು ಇರಬಹುದು ಎಂದ ಡಿ.ವಿ ಸದಾನಂದಗೌಡ, ಈ ರೀತಿಯ ಸಾಕಷ್ಟು ಪ್ರಯತ್ನಗಳ ನಡುವೆ ಶೇ10 ರಷ್ಟು ರಾಜ್ಯದ ಕಡೆ ಗಮನ ಹರಿಸಿದ್ದರೆ ರಾಜ್ಯದ ಸಮಸ್ಯೆಗಳನ್ನ ಪರಿಹರಿಸಬಹುದಿತ್ತು ಎಂದರು.
ತಮಿಳುನಾಡನ ರಾಜಕೀಯದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ, ಅಲ್ಲಿನ ರಾಜ್ಯಪಾಲರು ಸಂವಿಧಾನತ್ಮಕ ವಿಚಾರವನ್ನ ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದ್ದು, ಇದರ ಬಗ್ಗೆ ನಾವು ಅದನ್ನ ರಾಜಕೀಯ ದೃಷ್ಟಿಯಿಂದ ವಿಷ್ಲೇಶಣೆ ಮಾಡುವುದು ಸರಿಯಲ್ಲ ಎಂದರು. ತಮಿಳ್ ನಾಡಿನ ರಾಜಕೀಯ ಬಿಕ್ಕಟ್ಟನ್ನ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಸೂಕ್ತ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಿದ್ದು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ, ಇದೊಂದು ಸಂವಿಧಾನ ಬಿಕ್ಕಟ್ಟಿನ ವಿಚಾರ ಎಂದು ಸದಾನಂದಗೌಡ ತಿಳಿಸಿದರು.
ಎಸ್.ಎಂ ಕೃಷ್ಣ ಸೇರಿದಂತೆ ಯಾವುದೇ ನಾಯಕರನ್ನ ಪಕ್ಷಕ್ಕೆ ಬಲವಂತವಾಗಿ ಕರೆತರುವುದಿಲ್ಲ, ಸಂಘಟನೆ ಮೇಲೆ ಬಿಜೆಪಿ ಪಕ್ಷ ನಿಂತಿದ್ದು ರಾಜ್ಯದಲ್ಲಿ ಜನರಿಗೆ ಬಿಜೆಪಿ ಪರ್ಯಾರ ಶಕ್ತಿಯಾಗಿ ರೂಪುಗೊಳ್ಳುತ್ತಿದ್ದು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಧ್ರುವಿಕರಣ ಆರಂಭವಾಗಲಿದೆ ಎಂದು ತಿಳಿಸಿದರು.