ಬೇಗಿಹಳ್ಳಿ: ಭಾನುವಾರ ಮಧ್ಯಾಹ್ನ 3.15ರ ಸಮಯ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿ ತಾಂತ್ರಿಕ ದೋಷದಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಪೈಲಟ್ ಸಮಯಪ್ರಜ್ಞೆಯಿಂದ ಯಾವುದೇ ರೀತಿಯ ಅನಾಹುತ ಸಂಭವಿಸದೆ, ವಿಶಾಲವಾದ ಬಯಲಿನಲ್ಲಿ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಇಳಿಸಲಾಯಿತು.
ಪೈಲಟ್ ಹಾಗೂ ಸಹ ಪೈಲಟ್ ಇದ್ದ ಹೆಲಿಕಾಪ್ಟರ್ ಭಾರತೀಯ ವಾಯುಸೇನೆಗೆ ಸೇರಿದ್ದು, ಹೆಲಿಕಾಪ್ಟರ್ ಇಳಿದ ಜಾಗ ಜನವಸತಿ ಪ್ರದೇಶದಿಂದ ದೂರದಲ್ಲಿದ್ದು, ತಂತ್ರಜ್ಞರು ನೆರವಿಗಾಗಿ ಮತ್ತೊಂದು ಹೆಲಿಕಾಪ್ಟರ್ನಲ್ಲಿ ಸ್ಥಳಕ್ಕೆ ಆಗಮಿಸಿದರು. ಆದರೆ ಅದನ್ನು ದುರಸ್ತಿ ಮಾಡಲು ಸಾಧ್ಯವಾಗದ ಕಾರಣ ಮತ್ತೊಂದು ಹೆಲಿಕಾಪ್ಟರ್ನಲ್ಲಿ ಬಂದ ತಂಡ ದುರಸ್ತಿ ಕಾರ್ಯ ನಡೆಸಿ, ನಂತರ ಬೆಂಗಳೂರಿನತ್ತ ಮೂರೂ ಹೆಲಿಕಾಪ್ಟರ್ಗಳು ತೆರಳಿತು.