ಬೆಂಗಳೂರು: ಫೆ.21 ರ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ)ಯ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇನ್ಮುಂದೆ ಬಸ್, ಶಾಲಾ ವಾಹನಗಳಲ್ಲಿ ಬೆಂಕಿ ನಂದಿಸುವ ಸಾಧನವನ್ನು ಕಡ್ಡಾಯಗೊಳಿಸಲು ಆದೇಶ ನೀಡಿದೆ.
ಕೆಎಸ್ ಆರ್ ಟಿಸಿಗೆ ರಾಜ್ಯ ಸರ್ಕಾರ ಬೆಂಕಿ ನಂದಿಸುವ ಸಾಧನ ಕಡ್ಡಾಯಗೊಳಿಸಿರುವುದರ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದ್ದು, ಸರಕು ಸಾಗಣೆ ಮಾಡುವ ವಾಹನ, ಟ್ರಕ್ ಗಳಲ್ಲಿಯೂ ಬೆಂಕಿ ನಂದಿಸುವ ಸಾಧನವನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಬೆಂಕಿ ನಂದಿಸುವ ಸಾಧನ ಎಲ್ಲಾ ಬಸ್ ಗಳಲ್ಲಿಯೂ ಅಳವಡಿಸಲು ಒಂದಷ್ಟು ಸಮಯ ಬೇಕು. 24,000 ಸರ್ಕಾರಿ ಬಸ್ ಗಳು ರಾಜ್ಯದಲ್ಲಿದ್ದು, ಬೆಂಕಿ ನಂದಿಸುವ ಸಾಧನ ಖರೀದಿಗೆ ಟೆಂಡರ್ ಕರೆಯಲಾಗುವುದು ಹಾಗೂ ಅಧಿಕಾರಿಗಳಿಗೆ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಫೆ.21 ರಂದು ಕರ್ಪೂರದಿಂದ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ಅವಗಢಕ್ಕೆ ಪೂಜಾ ಸಾಮಗ್ರಿ (ಕರ್ಪೂರ) ವೇ ಕಾರಣ ಎಂದು ಹೇಳಲಾಗುತ್ತಿದೆ.