News Kannada
Friday, February 03 2023

ಬೆಂಗಳೂರು ನಗರ

ಜಗತ್ತಿನ ಮೂರನೇ ಕಡಿಮೆ ಖರ್ಚಿನ ನಗರ ಬೆಂಗಳೂರು…ಸಿಂಗಾಪುರ ಅತಿ ದುಬಾರಿ ನಗರ !

Photo Credit :

ಜಗತ್ತಿನ ಮೂರನೇ ಕಡಿಮೆ ಖರ್ಚಿನ ನಗರ ಬೆಂಗಳೂರು...ಸಿಂಗಾಪುರ ಅತಿ ದುಬಾರಿ ನಗರ !

ಬೆಂಗಳೂರು: ಜಗತ್ತಿನ ಕಡಿಮೆ ಖರ್ಚಿನ ನಗರಗಳ ಮೊದಲ ಹತ್ತರ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ಸಿಂಗಾಪುರ ಅತಿ ದುಬಾರಿ ನಗರಗಳಲ್ಲಿ ಪ್ರಥಮ ಸ್ಥಾನದಲ್ಲಿದೆ.

ಜಗತ್ತಿನ ಹತ್ತು ಕಡಿಮೆ ಖರ್ಚಿನ ನಗರಗಳ ಪೈಕಿ ಬೆಂಗಳೂರು(3ನೇ ಸ್ಥಾನ), ಚೆನ್ನೈ(6ನೇ ಸ್ಥಾನ), ಮುಂಬೈ(7ನೇ ಸ್ಥಾನ) ಹಾಗೂ ನವದೆಹಲಿ(10ನೇ ) ಸ್ಥಾನ ಪಡೆದಿವೆ ಎಂದು ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌(ಇಐಯು) ವರದಿ ಮಾಡಿದೆ.

ಸಿಂಗಾಪುರ ನಾಲ್ಕು ವರ್ಷಗಳಿಂದ ಸತತವಾಗಿ ಜಗತ್ತಿನ ದುಬಾರಿ ನಗರವೆನಿಸಿದ್ದು, ಹಾಂಕ್ ಕಾಂಗ್ ಮತ್ತು ಜೂರಿಕ್‌ ನಂತರದ ಸ್ಥಾನದಲ್ಲಿದೆ. 2017 ಜಾಗತಿಕ ಜೀವನ ನಿರ್ವಹಣಾ ವೆಚ್ಚ ವರದಿಯ ಪ್ರಕಾರ, ಕಡಿಮೆ ಖರ್ಚಿನ ನಗರಗಳು ದುಬಾರಿ ನಗರಗಳಲ್ಲಿ ಏಷ್ಯಾ ಭಾಗದ ನಗರಳೇ ಪ್ರಮುಖ ಸ್ಥಾನ ಪಡೆದಿದೆ.

ಮೊದಲ ಕಡಿಮೆ ಖರ್ಚಿನ ನಗರವಾಗಿ ಕಜಕಸ್ತಾನದ ‘ಆಲ್ಮಟಿ’ ಸ್ಥಾನ ಪಡೆದರೆ, ನಂತರದ ಸ್ಥಾನದಲ್ಲಿ ನೈಜೀರಿಯಾದ ‘ಲಾಗೋಸ್‌’ ಇದೆ. ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆಯು ಆಹಾರ, ನೀರು, ಉಡುಗೆ, ಸಂಚಾರ, ಮನೆ ಬಾಡಿಗೆ ಸೇರಿದಂತೆ 160 ಉತ್ಪನ್ನ ಹಾಗೂ ಸೇವೆಗಳ ದರ ಗಮನಿಸಿ ನಡೆಸಲಾಗಿದೆ.

See also  ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ದಿನದ 24 ಗಂಟೆಯೂ ಹೊಟೇಲ್ ಓಪನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು