ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಗಮನಸೆಳೆದರು.
ಭಾನುವಾರ ವೀಕೆಂಡ್ ಮೂಡ್ನಲ್ಲಿದ್ದ ಯಡಿಯೂರಪ್ಪ ಅವರು ದಿಢೀರ್ ಆಗಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಪ್ರಯಾಣಿಸಿದ್ದು ಹಲವರ ಕುತೂಹಲಕ್ಕೆ ಕಾರಣವಾಯಿತು. ನಮ್ಮ ದೇಶದಲ್ಲಿರುವ ವಿಐಪಿ ಸಂಸ್ಕೃತಿಗೆ ಇತಿಶ್ರೀ ಹಾಡಲು ಪ್ರಧಾನಿ ನರೇಂದ್ರಮೋದಿಯವರು ಕರೆ ನೀಡುತ್ತಿದ್ದಂತೆಯೇ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಾಮಾನ್ಯರಂತೆ ಮೆಟ್ರೋದಲ್ಲಿ ಸಂಚರಿಸಿ ತಮ್ಮ ಕೊಡುಗೆ ನೀಡಿದ್ದಾರೆ ಎಂಬ ಮಾತನ್ನು ಕೆಲವರು ಆಡುತ್ತಿದ್ದಾರೆ.
ಒಂದು ಮೂಲದ ಪ್ರಕಾರ ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಮೆಟ್ರೋ ಪ್ರಯಾಣ ಮಾಡುವ ಮೂಲಕ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಮೋದಿಯವರ ಆಶಯಕ್ಕೆ ಕೈಜೋಡಿಸುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ.
ವಿಜಯನಗರದ ಹೊಸಹಳ್ಳಿ ನಿಲ್ದಾಣದಿಂದ ಟ್ರಿನಿಟಿ ನಿಲ್ದಾಣದವರೆಗೆ ಪ್ರಯಾಣಿಕರ ನಡುವೆ ತಾನೊಬ್ಬ ಪ್ರಯಾಣಿಕನಂತೆ ಪ್ರಯಾಣಿಸಿದ್ದು ಜತೆಯಲ್ಲಿದ್ದ ಪ್ರಯಾಣಿಕರ ಅಚ್ಚರಿಗೆ ಕಾರಣವಾಯಿತು.