ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಜುಲೈ 4ರಂದು ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ (ಚುನಾವಣೆ) ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರುಗಳ ಚುನಾವಣೆ) ನಡೆಸಲು ತೀರ್ಮಾನಿಸಿದೆ.
ಮೈಸೂರು ಜಿಲ್ಲೆಯ ಮೈಸೂರು ಮಹಾನಗರಪಾಲಿಕೆಗೆ ವಾರ್ಡ್ ನಂ 32, ಬೆಂಗಳೂರು ನಗರ, ಬೊಮ್ಮಸಂದ್ರ ಪುರಸಭೆ ವಾರ್ಡ್ ನಂ -16, ಕೋಲಾರ ಜಿಲ್ಲೆಯ ಕೋಲಾರ ನಗರಸಭೆ – ವಾರ್ಡ್ ನಂ 21, ಮಂಡ್ಯ ಜಿಲ್ಲೆಯ ಮಂಡ್ಯ ನಗರಸಭೆ – ವಾರ್ಡ್ ನಂ 28, ಬೆಳಗಾವಿ ಜಿಲ್ಲೆಯ ಐನಾಪೂರ ಪಟ್ಟಣ ಪಂಚಾಯಿತಿ ವಾರ್ಡ್ ನಂ -15, ವಿಜಯಪುರ ಜಿಲ್ಲೆಯ ಇಂಡಿ ಪುರಸಭೆ – ವಾರ್ಡ್ ನಂ 18, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರಸಭೆ – ವಾರ್ಡ್ ನಂ -30, ಬೀದರ್ ಜಿಲ್ಲೆಯ ಬೀದರ್ ನಗರಸಭೆ – ವಾರ್ಡ್ ನಂ 33, ಗದಗ ಜಿಲ್ಲೆಯ ನರೇಗಲ್ ಪಟ್ಟಣ ಪಂಚಾಯಿತಿ – ವಾರ್ಡ್ ನಂ 15, ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆ- 15, ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆ – ವಾರ್ಡ್ ನಂ 13, 24, ಬೆಳಗಲಿ ಪಟ್ಟಣ ಪಂಚಾಯಿತಿ – ವಾರ್ಡ್ ನಂ 08 ಹಾಗೂ ಹುನಗುಂದ ಪುರಸಭೆ – ವಾರ್ಡ್ ನಂ 03. ಈ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ:
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದ್ದು, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂ. 21, ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಜೂ.22, ಉಮೇದುವಾರಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಜೂ.24, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಸಮಯ ಬೆಳಿಗ್ಗೆ 7ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ. ಜು.2, ಮರು ಮತದಾನ ಇದ್ದಲ್ಲಿ ಮತದಾನದ ಸಮಯ ಬೆಳಿಗ್ಗೆ 7ಗಂಟೆಯಿಂದ ಸಾಯಂಕಾಲ 5ಗಂಟೆವರೆಗೆ ಜು. 4, ಮತಗಳ ಎಣಿಕೆ ದಿನಾಂಕ ಜು.5ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕಿನ ಕೇಂದ್ರ ಸ್ಥಳದಲ್ಲಿ ನಡೆಯಲಿದೆ.