News Kannada
Tuesday, December 06 2022

ಬೆಂಗಳೂರು ನಗರ

ಅಕ್ರಮ ಮರಳು ಗಣಿಗಾರಿಕೆ ತಡೆಗೆ ವಿದೇಶದಿಂದ ಮರಳು ಆಮದು?

Photo Credit :

ಅಕ್ರಮ ಮರಳು ಗಣಿಗಾರಿಕೆ ತಡೆಗೆ ವಿದೇಶದಿಂದ ಮರಳು ಆಮದು?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಮರಳಿಗೆ ಅಭಾವ ತಲೆದೋರಿದ್ದು, ಚಿನ್ನದ ಬೆಲೆ ಬಂದಿದೆಯಲ್ಲದೆ, ಅಕ್ರಮ ಗಣಿಗಾರಿಕೆಯೂ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ತಡೆಗೆ ಸರ್ಕಾರ ವಿದೇಶದಿಂದ ಮರಳು ತರಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಬರ್ಮಾ, ಮಲೇಷಿಯಾ, ಥೈಲ್ಯಾಂಡ್ನಿಂದ ಮರಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ತೀರ್ಮಾನ ಮಾಡಿದ್ದು, ವಿದೇಶದಿಂದ ಬರುವ ಮರಳನ್ನು 25 ಕೆಜಿ ತೂಕದ ಬ್ಯಾಗ್ನಲ್ಲಿ ಸಿಮೆಂಟ್ ಮಾದರಿಯಲ್ಲಿ ಮಾರಾಟ ಮಾಡಲು ಆರು ಕಂಪೆನಿಗಳಿಗೆ ಅನುಮತಿ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

ಈ ಕುರಿತಂತೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಈ ಕ್ರಮದಿಂದ ಕಡಿಮೆ ದರದಲ್ಲಿ ಮರಳು ದೊರೆಯಲಿದ್ದು, ಕಡಿಮೆ ದರದಲ್ಲಿ ಮರಳನ್ನು ನೀಡಲು ಕಂಪೆನಿಗಳಿಗೆ ಸೂಚಿಸಲಾಗಿದೆ. ವಿದೇಶದಿಂದ ಮರಳು ತರಿಸುವುದರಿಂದ ರಾಜ್ಯದ ನೈಸರ್ಗಿಕ ಸಂಪತ್ತು ಉಳಿಯಲಿದೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದಂತಾಗುತ್ತದೆ. ಕಡಿಮೆ ದರದಲ್ಲಿ ಉತ್ತಮ ಮರಳು ನಿರ್ಮಾಣ ಕ್ಷೇತ್ರಕ್ಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಮರಳಿನ ಕೊರತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಕ್ರಮ ತಡೆಗೆ ಇದರಿಂದ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಕಾರ್ಯಗತವಾದರೆ ನೈಸರ್ಗಿಕ ಸಂಪತ್ತು ಉಳಿಯುವುದರ ಜತೆಗೆ ಜಲಮೂಲಕ್ಕೂ ಧಕ್ಕೆಯಾಗುವುದು ಸಹ ನಿಲ್ಲಲಿದೆ ಎಂದು ಹೇಳಿದ್ದಾರೆ.

See also  15ವರ್ಷ ಹಳೆಯ ವಾಹನಗಳಿಗೆ ನಿಷೇಧ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು