News Kannada
Wednesday, November 30 2022

ಬೆಂಗಳೂರು ನಗರ

ಬನ್ನೇರುಘಟ್ಟದಲ್ಲಿದ್ದಾನಂತೆ ಸೈಕೋಪಾತ್ ಎಚ್ಚರ! - 1 min read

Photo Credit :

ಬನ್ನೇರುಘಟ್ಟದಲ್ಲಿದ್ದಾನಂತೆ ಸೈಕೋಪಾತ್ ಎಚ್ಚರ!

ಬೆಂಗಳೂರು: ಇತ್ತೀಚೆಗೆ ಯಾವುದೇ ಪ್ರವಾಸಿ ತಾಣಗಳಿರಲಿ ಅಲ್ಲಿ ಸೈಕೋಪಾತ್ ಗಳಂತೆ ಆಡುವ ಪುಂಡರ ದಂಡು ಇದ್ದೇ ಇರುತ್ತದೆ. ದೂರದಿಂದ ಹೆಣ್ಣು ಮಕ್ಕಳನ್ನು ರೇಗಿಸುವುದು, ಅಸಭ್ಯವಾಗಿ ವರ್ತಿಸುವುದು, ಅಸಹ್ಯವಾಗಿ ಮಾತನಾಡುವುದು ಇವರ ಚಟವಾಗಿರುತ್ತದೆ.

ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಕೆಲವು ನಿರ್ಜನ ಸ್ಥಳಗಳಲ್ಲಿ ಇಂತಹವರಿಗೇನು ಕೊರತೆಯಿಲ್ಲ. ಇವರೆಲ್ಲರ ನಡುವೆ ಹೆಣ್ಣು ಮಕ್ಕಳಂತೆ ಉಡುಪು ಹಾಕಿಕೊಂಡು ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುವ ಸೈಕೋಪಾತ್ ಕೂಡ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂತ ಸೈಕೋಪಾತ್ನಿಂದ ಮಾನಸಿಕ ಹಿಂಸೆ ಅನುಭವಿಸಿದ ಮಹಿಳೆಯೊಬ್ಬರು ಅದನ್ನು ಸಾಮಾಜಿಕ ತಾಣದಲ್ಲಿ ಹಾಕಿ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗೆ ರಾಜಶ್ರೀ ಎಂಬುವರು ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇವರ ಬೈಕ್ ಕೈಕೊಟ್ಟಿದ್ದರಿಂದ ಮೆಕಾನಿಕ್ ನನ್ನು ಕರೆದುಕೊಂಡು ಬರಲು ಪತಿ ಹೋಗಿದ್ದಾಗ ಇವರು ರಸ್ತೆ ಬದಿ ನಿಂತಿದ್ದರು. ಈ ವೇಳೆ ಮಹಿಳೆಯರಂತೆ ಮೇಕಪ್ ಮಾಡಿಕೊಂಡು ಬಂದ ಸೈಕೋ ರಾಜಶ್ರೀ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ರಾಜಶ್ರೀ ಅವರು ಸಹಾಯಕ್ಕಾಗಿ ಈ ಮಾರ್ಗದಲ್ಲಿ ಹೋಗುತ್ತಿದ್ದ ವಾಹನಗಳ ಸವಾರರನ್ನು ಅಂಗಲಾಚಿದರೂ ಯಾರೊಬ್ಬರೂ ಬಾರದಿರುವುದು ವಿಷಾದಕರ.

ಈ ಸಂಬಂಧ ರಾಜಶ್ರೀ ಅವರು ಬೆಂಗಳೂರು ನಗರ ಪೊಲೀಸರಿಗೆ ಘಟನೆ ವಿವರವನ್ನು ಪೋಸ್ಟ್ ಮಾಡಿರುವುದಲ್ಲದೆ, ಫೇಸ್ಬುಕ್ ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮುಖಕ್ಕೆ ಪೌಡರ್ ಹಚ್ಚಿಕೊಂಡು ಹಣೆಬೊಟ್ಟು ಇಟ್ಟು ಲಿಪ್ಸ್ಟಿಕ್ ಹಚ್ಚಿಕೊಂಡಿದ್ದನಲ್ಲದೆ, ಮಹಿಳೆಯರ ಉಡುಪನ್ನು ಸಹ ಧರಿಸಿದ್ದ ಸೈಕೋಪಾತ್ ನೈಸ್ ರಸ್ತೆಯಲ್ಲಿ ಹೋಗುವವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದರ ಬಗ್ಗೆ ಪೊಲೀಸರಿಗೆ ಪೋಸ್ಟ್ ಮಾಡಿದ್ದಾರೆ.

ಇನ್ನಾದರೂ ಈ ರಸ್ತೆಯಲ್ಲಿ ತೆರಳುವವರು ಎಚ್ಚರವಾಗಿರಿ ಜತೆಗೆ ಆತ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ…

See also  ಕೊರೋನಾ ಎರಡನೇ ಅಲೆ ಅಬ್ಬರ, ಬೆಂಗಳೂರಿನಲ್ಲಿ 1369 ಮಂದಿ ಪೊಲೀಸ್ ಸಿಬ್ಬಂದಿಗೆ ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು