News Kannada
Wednesday, December 07 2022

ಬೆಂಗಳೂರು ನಗರ

ಜಾವಗಲ್ ನಲ್ಲಿ ಬೃಹತ್ ತ್ರಿವರ್ಣ ಧ್ವಜ ನಿರ್ಮಾಣ!

Photo Credit :

ಜಾವಗಲ್ ನಲ್ಲಿ ಬೃಹತ್ ತ್ರಿವರ್ಣ ಧ್ವಜ ನಿರ್ಮಾಣ!

ಹಾಸನ: ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ದೇಶದ ಬಗ್ಗೆ, ರಾಷ್ಟ್ರಧ್ವಜದ ಬಗ್ಗೆ ಅರಿವನ್ನು ಮೂಡಿಸುವ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜಾಥಾವನ್ನು ಮಾಡುವ ಉದ್ದೇಶದಿಂದ ಬಾಂಧವ್ಯಲೋಕ, ಜಾವಗಲ್ ಹಾಗೂ ಅಂಗಡಿ ಮಾಲಿಕರು ಮತ್ತು ವ್ಯಾಪಾರಸ್ಥರು ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಹಲವಾರು ಕನ್ನಡಪರ, ಪ್ರಗತಿಪರ ಸಂಘಟನೆಗಳು ಮತ್ತು ಗ್ರಾಮಸ್ಥರು ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬೃಹತ್ ರಾಷ್ಟ್ರಧ್ವಜವನ್ನು ನಿರ್ಮಿಸಿದ್ದಾರೆ.

ಈ ಹಿಂದೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಹೊಲಿಯುವ ಮೂಲಕ ಜನಮನ್ನಣೆಗಳಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಅತೀವ ದೇಶಪ್ರೇಮಿಯಾದ ಜಾವಗಲ್ ಹೋಬಳಿಯ ದೇಶಾಣಿ ಗ್ರಾಮದ ದರ್ಜಿಯಾದ ಬಸವರಾಜುರವರು ಸುಮಾರು 20 ದಿನಗಳಿಂದಲೂ ಜಾವಗಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಿದ್ದ ಪಡಿಸುತ್ತಿರುವ 10 ಅಡಿ ಅಗಲ ಹಾಗೂ 1508 ಅಡಿ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಬೆಳಿಗ್ಗೆ 10 ಗಂಟೆಗೆ ಪ್ರದರ್ಶನಗೊಳಿಸಲಿದ್ದಾರೆ.

ಈ ಪ್ರದರ್ಶನದಲ್ಲಿ ಹೋಬಳಿಯ ಎಲ್ಲ ಜನಪ್ರತಿನಿಧಿಗಳು, ಗ್ರಾಮದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ತ್ರೀಶಕ್ತಿ ಮಹಿಳಾ ಸಂಘಟನೆಗಳ ಮಹಿಳೆಯರು ಸೇರಿದಂತೆ ಒಟ್ಟು 4000ಕ್ಕೂ ಹೆಚ್ಚು ಮಂದಿ ಈ ಧ್ವಜವನ್ನು ಹಿಡಿಯುವ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ಈ ತ್ರಿವರ್ಣ ಧ್ವಜಕ್ಕೆ ಬೆಂಗಳೂರಿನಿಂದ ಸುಮಾರು 1400 ಮೀಟರ್ ಗೂ ಹೆಚ್ಚು ಬಟ್ಟೆಯನ್ನು ತಂದಿದ್ದು, ಧ್ವಜಕ್ಕೆ ಖರ್ಚಾಗಲಿರುವ ಸುಮಾರು 60,000 ಕ್ಕೂ ಹೆಚ್ಚು ಮೊತ್ತವನ್ನು ಗ್ರಾಮದ ಅನೇಕ ಮುಖಂಡರು, ಸಂಘಟನೆಗಳು ಭರಿಸಿದ್ದಾರೆ.

ಅಂದು ಸಂಜೆ ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಸಂಭ್ರಮವನ್ನು ಏರ್ಪಡಿಸಿದ್ದು, ಸಾಹಿತಿ ಚಟ್ನಳ್ಳಿ ಮಹೇಶ್ ಅವರಿಂದ ಮಾತಿನ ಮಂಟಪ, ನಾಡಿನ ಜನಪ್ರಿಯ ಕಾರ್ಯಕ್ರಮವಾದ ಜೀ ವಾಹಿನಿಯ ಸರಿಗಮಪ ಖ್ಯಾತಿಯ ಸುಹಾನ ಸೈಯದ್, ವೇಣುಗೋಪಾಲ್, ವಿಶಾಖ್, ಲಾಲಿತ್ಯ ಅನ್ವೇಕರ್ ಅವರಿಂದ ಸಂಗೀತ ರಸಸಂಜೆ, ಹಾಗೂ ಖ್ಯಾತ ಮಿಮಿಕ್ರಿ ಕಲಾವಿದರಾದ ಪ್ರವೀಣ್ ಅವರಿಂದ ನಗೆ ಹೊನಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಬಾಂಧವ್ಯಲೋಕದ ಅಧ್ಯಕ್ಷರಾದ ಜಾವಗಲ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.

See also  ಸ್ಮಾರ್ಟ್ ಸಿಟಿ ಯೋಜನೆಯಡಿ ಆರೋಗ್ಯ ವಲಯಕ್ಕೆ ಒತ್ತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು