News Kannada
Friday, December 02 2022

ಬೆಂಗಳೂರು ನಗರ

ಜಾತೀಯತೆ ಇರೋತನಕ ಮೀಸಲಾತಿ ಇರಲೇಬೇಕು: ಸಿಎಂ

Photo Credit :

ಜಾತೀಯತೆ ಇರೋತನಕ ಮೀಸಲಾತಿ ಇರಲೇಬೇಕು: ಸಿಎಂ

ಬೆಂಗಳೂರು: ಎಲ್ಲಿಯವರೆಗೆ ಸಮಾಜದಲ್ಲಿ ಜಾತೀಯತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಿ. ಡಿ.ದೇವರಾಜ ಅರಸು ಅವರ 102 ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಾಲಿನ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಈ ನಾಡು ಕಂಡ ಅಪರೂಪದ ಹಾಗೂ ಬದ್ಧತೆಯುಳ್ಳ ರಾಜಕಾರಣಿ ಎಂದು ಸ್ಮರಿಸಿದರಲ್ಲದೆ, ಅಧಿಕಾರ ಹಾಗೂ ಅವಕಾಶ ಸಿಕ್ಕಾಗ ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದಲ್ಲಿ ಅದೇ ದೊಡ್ಡ ಸಾಧನೆ ಎಂದು ಹೇಳಿದರು.

ರಾಜಕೀಯ ಸ್ವಾತಂತ್ರ್ಯ ಇದ್ದರೇ ಸಾಲದು ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತಲ್ಲದೆ, ಇದರಲ್ಲಿ ನಂಬಿಕೆಯಿಟ್ಟು ದೇವರಾಜು ಅರಸು ಅವರು ಆಡಳಿತ ನಡೆಸಿದರು ಎಂದು ನೆನಪಿಸಿಕೊಂಡರು.

ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿನ ಉತ್ತಮ ಬದಲಾವಣೆಯ ವಿರುದ್ಧವೇ ಸದಾ ಕಾಲ ಇರುತ್ತಾರೆ. ಅವರಿಗೆ ಸಮಾನತೆ ಬೇಕಾಗಿಲ್ಲ ಮೌಢ್ಯಗಳು, ಕಂದಾಚಾರಗಳು ಇರುವ ಕಡೆ ಷೋಷಣೆ ನಡೆಯುತ್ತದೆ. ದೇವರಾಜ ಅರಸು ಅವರು ಇದನ್ನೆಲ್ಲಾ ಮೆಟ್ಟಿ ನಿಂತು ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಭೂಹೀನರಿಗೆ ಭೂಮಿ ದೊರಕಿಸಿಕೊಟ್ಟರು. ಬಡವರಿಗೆ ಅಧಿಕಾರದಲ್ಲಿ ಹಾಗೂ ರಾಜಕೀಯದಲ್ಲಿ ಪಾಲು ಸಿಗಬೇಕಾದರೆ ದಿವಂಗತ ಅರಸು ಅವರೇ ಕಾರಣ. ಅದನ್ನು ಜಾರಿಗೊಳಿಸಲು ಅರಸು ಅವರಲ್ಲಿದ್ದ ಇಚ್ಚಾಶಕ್ತಿಯೇ ಪ್ರೇರಣೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮುಖಂಡರು ಹಾಗೂ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಹಾಗೂ ದಿ. ದೇವರಾಜ ಅರಸು ಅವರ ಮಾರ್ಗದರ್ಶನದಂತೆ ತಮ್ಮ ರಾಜಕಾರಣವನ್ನು ಆರಂಭಿಸಿ ಇಂದಿಗೂ ಕೂಡ ದೀನದಲಿತರ, ಬಡವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದಾರೆ. ಈ ಸಾಲಿನ ದಿವಂಗತ ದೇವರಾಜ ಅರಸು ಅವರ ಪ್ರಶಸ್ತಿ ಅವರಿಗೆ ಲಭಿಸಿರುವುದು ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿದೆ ಎಂದರು.

ದೇವರಾಜ ಅರಸು ಅವರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ ಅವರು ಮಾತನಾಡಿ ಈ ನಾಡು ಕಂಡ ಅಪರೂಪದ ಹಾಗೂ ದಿವಂಗತ ಅರಸು ಅವರ ಜೀವನಶೈಲಿಯನ್ನು ಮೈಗೂಡಿಸಿಕೊಂಡು ಅರಸು ಅವರ ಆಶಯಗಳನ್ನು ಜಾರಿಗೆ ತರುತ್ತಿರುವ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಅರಸು ಕುರಿತಂತೆ “ಮರೆಯಲಾದ ಮಾಣಿಕ್ಯ” ಎಂಬ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ವಿವಿಧ ಸ್ಪರ್ಧಾತ್ಮಕ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

See also  ರಾಜ್ಯದಲ್ಲಿ ಮತ್ತೆ ಲಾಟರಿ ಯೋಜನೆ ಜಾರಿಗೆ  ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು