News Kannada
Saturday, October 01 2022

ಬೆಂಗಳೂರು ನಗರ

ಪತ್ತೆಯಾಗದ ಗೌರಿ ಹತ್ಯೆಗೈದ ಹಂತಕರು: ಅಸಮಾಧಾನ - 1 min read

Photo Credit :

ಪತ್ತೆಯಾಗದ ಗೌರಿ ಹತ್ಯೆಗೈದ ಹಂತಕರು: ಅಸಮಾಧಾನ

ಬೆಂಗಳೂರು: ಗೌರಿ ಹತ್ಯೆಯಾಗಿ ತಿಂಗಳು ಕಳೆದರೂ ಹಂತಕರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದಕ್ಕೆ ಗೌರಿ ಸೋದರ ಇಂದ್ರಜಿತ್ ಲಂಕೇಶ್, ಸೋದರಿ ಕವಿತಾ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್ ಮಾತನಾಡಿ ಸೋದರಿ ಗೌರಿ ಲಂಕೇಶ್ ಹತ್ಯೆಯಾಗಿ ತಿಂಗಳು ಕಳೆದರೂ ಹಂತಕರು ಪತ್ತೆಯಾಗಿಲ್ಲ. ಹಂತಕರ ಪತ್ತೆಗೆ ವಿಶೇಷ ತನಿಖಾ ದಳ ರಚನೆ ಮಾಡಿ ಎಸ್ಐಟಿಯ ನಾಲ್ಕು ತಂಡಗಳು ರಾಜ್ಯ-ಹೊರರಾಜ್ಯಗಳ ಮೂಲೆಮೂಲೆಗಳಿಗೆ ತೆರಳಿ ಶೋಧ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸರ್ಕಾರ ಈಗಲಾದರೂ ತನಿಖೆಯನ್ನು ಚುರುಕುಗೊಳಿಸಿ ಆದಷ್ಟು ಬೇಗ ಬಂಧಿಸುವ ಮೂಲಕ ಗೌರಿ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ನಡುವೆ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಡಿಸಿಪಿ ಅನುಚೇತ್ ಸಾರಥ್ಯದ ನೂರಕ್ಕೂ ಹೆಚ್ಚು ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ನಾನಾ ಕೋನಗಳಲ್ಲಿ ವಿಚಾರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಶಪಡಿಸಿಕೊಳ್ಳಲಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಗೌರಿ ಮೊಬೈಲ್ ಕರೆಗಳ ವಿವರಗಳನ್ನು ಬೆನ್ನತ್ತಿ ತನಿಖೆ ನಡೆಸುತ್ತಿದ್ದರೂ ಹಂತಕರ ಸುಳಿವು ಮಾತ್ರ ಲಭ್ಯವಾಗಿಲ್ಲ.

ನಕ್ಸಲ್ ಮುಖಂಡರು, ಮಾಜಿ ನಕ್ಸಲರು, ಹಲವಾರು ಸಂಘಟನೆಗಳ ಮುಖ್ಯಸ್ಥರು ಮತ್ತು ಗೌರಿ ವಿರೋಧಿ ಪಾಳೆಯದ ಪ್ರಮುಖರನ್ನು ಎಸ್ಐಟಿ ವಿಚಾರಣೆಗೊಳಪಡಿಸಿ ಹಲವಾರು ಮಾಹಿತಿಗಳನ್ನು ಕಲೆ ಹಾಕಿದೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಗೌರಿ ಹಂತಕರ ಸುಳಿವು ಪತ್ತೆಯಾಗಿದೆ. ಆದಷ್ಟು ಬೇಗ ಕೊಲೆಗಾರರನ್ನು ಬಂಧಿಸುವ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.ಆದರೆ ಗೌರಿ ಹತ್ಯೆಯಾಗಿ ತಿಂಗಳು ಕಳೆದರೂ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ

See also  ಅಧಿಕಾರದ ದುರಾಸೆಯಿಂದ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದಾರೆ : ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು