News Kannada
Monday, October 03 2022

ಬೆಂಗಳೂರು ನಗರ

ಗುಜರಾತ್ ಫಲಿತಾಂಶ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ: ಎಚ್ ಡಿಕೆ - 1 min read

Photo Credit :

ಗುಜರಾತ್ ಫಲಿತಾಂಶ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ  ಬದಲಾವಣೆ: ಎಚ್ ಡಿಕೆ

ಬೆಂಗಳೂರು: ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆ ಆಗಲಿದೆ ಎಂದು ಜೆಡಿಎಸ್ ನ ರಾಜಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಬಳಿಕ ರಾಜ್ಯದಲ್ಲಿಯೂ ಮಹತ್ತರ ಬದಲಾವಣೆಗಳು ಆಗುವುದು. ಗುಜರಾತಲ್ಲಿ ಅಧಿಕಾರಕ್ಕೆ ಯಾರು ಬರುತ್ತಾರೆನ್ನುವ ಬಗ್ಗೆ ನನಗೆ ಕುತೂಹಲವಿಲ್ಲ ಎಂದು ತಿಳಿಸಿದರು.

ಕೆಲವು ನಾಯಕರು ಗುಜರಾತ್ ಫಲಿತಾಂಶ ಪ್ರಕಟವಾದ ಬಳಿಕ ಜೆಡಿಎಸ್ ನವರು ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗುವರು ಎನ್ನಲಾಗುತ್ತಿದೆ. ಬಿಜೆಪಿಯರು ಕಾಂಗ್ರೆಸ್ಸಿಗೆ ಬರುತ್ತಾರೆಂದು ಕೆಲವರು ಹೇಳುತ್ತಾರೆ. ಆದರೆ ಬದಲಾವಣೆ ನಿಶ್ಚಿತ ಎಂದರು.

ಡಿ.18ರ ಬಳಿಕ ಮೈಸೂರು ಮಿನರಲ್ಸ್ ಕಂಪೆನಿಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಹಿರಂಗ ಮಾಡುವುದಾಗಿ ಇದೇ ವೇಳೆ ಅವರು ಹೇಳಿದರು.

See also  ತೆರಿಗೆ ವಂಚನೆ ಪ್ರಕರಣ: ಡಿ.ಕೆ.ಶಿವಕುಮಾರ್ ಜಾಮೀನು ಮಂಜೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು