News Kannada
Friday, October 07 2022

ಬೆಂಗಳೂರು ನಗರ

ಬೆಂಗಳೂರಲ್ಲಿ ಮತ್ತೆ ಅಬ್ಬರಿಸಿದ ಮಚ್ಚು: ಯುವಕನ ಹತ್ಯೆ - 1 min read

Photo Credit :

ಬೆಂಗಳೂರಲ್ಲಿ ಮತ್ತೆ ಅಬ್ಬರಿಸಿದ ಮಚ್ಚು: ಯುವಕನ ಹತ್ಯೆ

ಬೆಂಗಳೂರು: ಅಣ್ಣನ ಮದುವೆಯ ಸಂಭ್ರಮದಲ್ಲಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ಡಿ.ಜೆ. ಹಳ್ಳಿಯ ನೂರ್ ಮಸೀದಿ ಸಮೀಪ ನಡೆದಿದೆ.

ಗುರುವಾರ ರಾತ್ರಿ ಈ ಕೊಲೆ ನಡೆದಿದ್ದು, ಕೊಲೆಯಾದವನನ್ನು 23ರ ಹರೆಯದ ರಿಜ್ವಾನ್ ಎಂದು ಗುರುತಿಸಲಾಗಿದೆ. ಮೂರು ಮಂದಿ ಈತನನ್ನು ಡ್ರಾಗರ್ ನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಛೋಟಾ ಶಾಹೀದ್, ಚೆನ್ನೈ ಶಾಹೀದ್ ಸಹಿತ ಮತ್ತೊಬ್ಬ ವ್ಯಕ್ತಿ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಮಧ್ಯರಾತ್ರಿ ಮಾತನಾಡಲಿಕ್ಕಿದೆ ಎಂದು ರಿಜ್ವಾನ್ ಹೊರಕರೆದ ಹಂತಕರು ದಾಳಿ ಮಾಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ರಿಜ್ವಾನ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲು ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಡಿ.ಜೆ. ಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಂತಕರು ಸ್ಥಳದಿಂದ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ.

ಇಂದು ರಿಜ್ವಾನ್ ನ ಅಣ್ಣ ಇರ್ಫಾನ್ ನ ಮದುವೆ ಕಾರ್ಯಕ್ರಮವಿತ್ತು. ಹಾಗಾಗಿ ಎಲ್ಲರೂ ಮುನ್ನಾದಿನ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಂತಕರು ರಿಜ್ವಾನ್ ನನ್ನು ಹೊರಕರೆದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಎಚ್ ಡಿಕೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು