News Kannada
Friday, December 02 2022

ಬೆಂಗಳೂರು ನಗರ

ಕಾಂಗ್ರೆಸ್ ನ ಅಂತಿಮ ಪಟ್ಟಿ ಬಿಡುಗಡೆ: ಬಾದಾಮಿಯಿಂದ ಸಿದ್ದರಾಮಯ್ಯ, ಶಾಂತಿನಗರಕ್ಕೆ ಹ್ಯಾರಿಸ್

Photo Credit :

ಕಾಂಗ್ರೆಸ್ ನ ಅಂತಿಮ ಪಟ್ಟಿ ಬಿಡುಗಡೆ: ಬಾದಾಮಿಯಿಂದ ಸಿದ್ದರಾಮಯ್ಯ, ಶಾಂತಿನಗರಕ್ಕೆ ಹ್ಯಾರಿಸ್

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದ್ದು, ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ.

ಕಾಂಗ್ರೆಸ್ ನಿಂದ ಬಿಡುಗಡೆಗೊಂಡಿರುವ ಪಟ್ಟಿಯ ಪ್ರಕಾರ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಲಿರುವರು. ಶಾಂತಿನಗರದ ಬಗ್ಗೆ ಇದ್ದ ಗೊಂದಲ ಕೂಡ ನಿವಾರಣೆಯಾಗಿದೆ. ಶಾಸಕ ಎನ್. ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ಕಾರಣ ಈ ಕ್ಷೇತ್ರದ ಟಿಕೆಟ್ ಬಗ್ಗೆ ಗೊಂದಲವಿತ್ತು. ಆದರೆ ಹಾಲಿ ಶಾಸಕ ಹ್ಯಾರಿಸ್ ಗೆ ಇಲ್ಲಿಂದ ಟಿಕೆಟ್ ನೀಡಲಾಗಿದೆ.

ಜಗಳೂರಿನಿಂದ ಈ ಮೊದಲು ಎಎಲ್ ಪುಷ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದನ್ನು ಬದಲಾಯಿಸಿ ಹೆಚ್.ಪಿ. ರಾಜೇಶ್ ಅವರಿಗೆ ನೀಡಲಾಗಿದೆ. ಅದೇ ರೀತಿ ತಿಪಟೂರಿನಲ್ಲಿ ಬಿ. ನಂಜಮಣಿ ಬದಲಿಗೆ ಕೆ.ಷಡಾಕ್ಷರಿಗೆ ಟಿಕೆಟ್ ನೀಡಲಾಗಿದೆ. ಪದ್ಮನಾಭನಗರದಲ್ಲಿ ಬಿ. ಗುರಪ್ಪ ನಾಯ್ಡು ಬದಲು ಎಂ. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಡಿಕೇರಿಯಲ್ಲಿ ಚಂದ್ರಮೌಳಿ ಬದಲಿಗೆ ಕೆ.ಪಿ. ಚಂದ್ರಕಲಾಗೆ ಟಿಕೆಟ್ ಸಿಕ್ಕಿದೆ.

ಕಿತ್ತೂರಿನಿಂದ ಡಾ. ಬಿ. ಇನಾಮ್ದಾರ್, ನಾಗಠಾಣದಿಂದ ವಿಠಲ ದೋಂಢಿಬ ಕಟಕಧೋಂಡ, ಸಿಂದಗಿಯಿಂದ ಮಲ್ಲಣ್ಣ ಸಾಲಿ, ರಾಯಚೂರಿನಿಂದ ಸಯದ್ ಯಾಸಿನ್ ಗೆ ಟಿಕೆಟ್ ನೀಡಲಾಗಿದೆ.

See also  ಮಾರ್ಷಲ್ ಕಾರಿಯಪ್ಪ ದೇಶಸೇವೆ ಅಪಾರ: ಉಪಮುಖ್ಯಮಂತ್ರಿ ಪರಮೇಶ್ವರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು