News Kannada
Monday, December 05 2022

ಬೆಂಗಳೂರು ನಗರ

ಆರೋಗ್ಯ ಇಲಾಖೆಯಿಂದ ಗರ್ಭಧಾರಣೆ ತಡೆಗೆ ‘ಚುಚ್ಚುಮದ್ದು’ ಯೋಜನೆ

Photo Credit :

ಆರೋಗ್ಯ ಇಲಾಖೆಯಿಂದ ಗರ್ಭಧಾರಣೆ ತಡೆಗೆ 'ಚುಚ್ಚುಮದ್ದು' ಯೋಜನೆ

ಬೆಂಗಳೂರು: ಮೊದಲ ಮಗುವಿನ ನಂತರ ಎರಡನೇ ಮಗು ಪಡೆಯುವ ಮುನ್ನ ಕನಿಷ್ಠ ಮೂರು ವರ್ಷಗಳ ಅಂತರವಿರ ಬೇಕೆನ್ನುವ ಕಾರಣಕ್ಕೆ ಆರೋಗ್ಯ ಇಲಾಖೆಯು ಗರ್ಭನಿರೋಧಕ ಚುಚ್ಚುಮದ್ದುನ್ನು ಯೋಜನೆ ಆರಂಭಿಸಿದೆ.

ಗರ್ಭದಾರಣೆ ತಡೆಗೆ ಕಾಪರ್-ಟಿ ಹಾಗೂ ಮಾತ್ರೆ ಬಳಸಲು ಹಿಂದೇಟು ಮಾಡುವ ಮಹಿಳೆಯರಿಗೆ ಈ ಯೋಜನೆಯನ್ನು ಆರೋಗ್ಯ ಇಲಾಖೆ ಜಾರಿಗೊಳಿಸಿದೆ. ಒಂದು ವರ್ಷದಲ್ಲಿ ಒಟ್ಟು 10.172 ಮಂದಿ ಚುಚ್ಚುಮದ್ದು ಹಾಕಿಸಿಕೊಂಡಿದ್ದು ದಾವಣಗೆರೆಯಲ್ಲಿ 878 ಹಾಗೂ ಹಾವೇರಿಯಲ್ಲಿ 48ಮಂದಿ ಮಾತ್ರ ಚುಚ್ಚು ಮದ್ದು ಹಾಕಿಸಿಕೊಳ್ಳಲು ಆಸಕ್ತಿ ತೋರಿಸಿದ್ದಾರೆ.

ಗರ್ಭತಡೆಗೆ ವರ್ಷದಲ್ಲಿ ನಾಲ್ಕು ಡೋಸ್ ಗಳಲ್ಲಿ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು. ಈ ಡೋಸ್ ನ್ನು ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಚುಚ್ಚು ಮದ್ದನ್ನು ಹಾಕುತ್ತಾರೆ. ಇದೀಗ ಆರಂಭವಾದ ವರ್ಷದಲ್ಲಿಯೇ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ.

ಜಿಲ್ಲೆಯಲ್ಲಿ ಚುಚ್ಚು ಮದ್ದು ಹಾಕಿಸಿಕೊಂಡವರು: ಬೀದರ್- 720
ಕಲಬುರ್ಗಿ- 59
ವಿಜಯಪುರ- 240
ಯಾದಗಿರಿ- 58
ರಾಯಚೂರು- 293
ಬಾಗಲಕೋಟೆ- 129
ಬೆಳಗಾವಿ- 720
ಕೊಪ್ಪಳ- 240
ಧಾರವಾಡ 380
ಗದಗ- 275
ಉತ್ತರ ಕನ್ನಡ- 11
ಹಾವೇರಿ- 48
ಬಳ್ಳಾರರಿ 345ದಾವಣಗೆರೆ- 878
ಶಿವಮೊಗ್ಗ- 702
ಚಿತ್ರದುರ್ಗ-785
ಉಡುಪಿ-214
ಚಿಕ್ಕಮಗಳೂರು-190
ತುಮಕೂರು- 270
ಚಿಕ್ಕಾಬಳ್ಳಾಪುರ-452
ದಕ್ಷಿಣ ಕನ್ನಡ-149
ಹಾಸನ30 ಕೊಡಗು- 77
ಮೈಸೂರು-623
ಮಂಡ್ಯ- 173
ಚಾಮರಾಜನಗರ- 149
ರಾಮನಗರ- 175
ಬೆಂಗಳೂರು ನಗರ- 295
ಬೆಂ. ಗ್ರಾಮಾಂತರ- 198
ಕೋಲಾರ-151

See also  ಕರ್ಫ್ಯೂ ಗೆ ಜನರು ಸಹಕಾರ ಕೊಡಬೇಕು - ಸಚಿವ ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು