ಬೆಂಗಳೂರು: ಗಾಳಿ ಸಹಿತ ಮಳೆ ಸುರಿದ ಕಾರಣ ಕೆಲವು ಮರಗಳು ಧರೆಗುರುಳಿ, ರಸ್ತೆಗಳಲ್ಲಿ ನೀರು ನಿಂತಿರುವ ಘಟನೆಯು ಶುಕ್ರವಾರ ನಡೆದಿದೆ.
ಮರಗಳು ಉರುಳಿಬಿದ್ದ ಪರಿಣಾಮ ಎಚ್ ಎಸ್ ಆರ್ ಲೇಔಟ್ ಬಳಿಯ ಅಗರ ಕೆರೆ ಹಾಗೂ ಚಿಕ್ಕಸಂದ್ರ ಸಮೀಪದ ಸರ್ಜಾಪುರ ರಸ್ತೆ, ಧೂಪನಹಳ್ಳಿ ಸೇತುವೆಯಲ್ಲಿ ವಾಹನಸಂಚಾರಕ್ಕೆ ಅಡ್ಡಿಯಾಗಿದೆ.
ಮಳೆಯಿಂದಾಗಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಯಿತು. ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.