ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ತಮ್ಮ ಭಾಷಣ ಅರ್ಧದಲ್ಲೇ ಮೊಟಕುಗೊಳಿಸಿದರು.
ರಾಜ್ಯಪಾಲರು ಭಾಷಣ ಓದಲು ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. 22 ಪುಟಗಳ ಭಾಷಣದಲ್ಲಿ ಕೇವಲ ಎರಡು ಪುಟಗಳನ್ನು ಓದಿದ ರಾಜ್ಯಪಾಲರು ಅಲ್ಲಿಂದ ನಿರ್ಗಮಿಸಿದರು.
ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿರುವುದರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಅವರು ಗರಂ ಆದ ಘಟನೆಯು ನಡೆಯಿತು.