ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬ ರಾಜಕಾರಣ, ಜಾತಿ ರಾಜಕಾರಣಕ್ಕೆ ಕೊನೆಗಾಲಕ್ಕೆ ಬಂದಿದೆ ಎಂದು ಬಿಜೆಪಿ ರಾಜ್ಯ ಪಾಧ್ಯಕ್ಷ ಬಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬ ರಾಜಕಾರಣವನ್ನು ಬೇರು ಸಹಿತ ಕಿತ್ತು ಬಿಸಾಕಬೇಕು. ದೇವೇಗೌಡ ಅವರ ಮಗ ಮುಖ್ಯಮಂತ್ರಿ, ಸೊಸೆ ಶಾಸಕಿ, ಇನ್ನೊಬ್ಬ ಮಗ ಸಚಿವ, ಇಬ್ಬರು ಮೊಮ್ಮಕ್ಕಳು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು.
ಇಂತಹ ಕುಟುಂಬ ರಾಜಕಾರಣ ದೇಶದಲ್ಲೇ ಕಂಡಿಲ್ಲ. ಒಕ್ಕಲಿಕ ಸಮುದಾಯದ ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸಿದ ಹೆಗ್ಗಳಿಕೆ ದೇವೇಗೌಡರಿಗೆ ಸಲ್ಲುತ್ತದೆ ಎಂದರು.