ಬೆಂಗಳೂರು: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಶನಿವಾರ ಸಂಜೆ ಮಹಾರಾಷ್ಟ್ರ ಮತ್ತು ಗೋವಾದ ರೆಸಾರ್ಟ್ ಗಳಿಗೆ ತೆರಳಿದ್ದಾರೆ.
ವಿಮಾನದ ಮೂಲಕವಾಗಿ ಇವರೆಲ್ಲರೂ ಗೋವಾ ಮತ್ತು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ನೇತೃತ್ವದಲ್ಲಿ ಇವರು ಗೋವಾ ಮತ್ತು ಮಹಾರಾಷ್ಟ್ರದ ಖಾಸಗಿ ರೆಸಾರ್ಟ್ ಗಳಿಗೆ ತೆರಳುವರು ಎಂದು ವರದಿಗಳು ತಿಳಿಸಿವೆ.
ಮತ್ತೊಮ್ಮೆ ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣವು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ.