ಬೆಂಗಳೂರು: ಮಂಗಳಮುಖಿಯರ ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಆರ್ ಎಂಸಿ ಯಾರ್ಡ್ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ದೀಪಾವಳಿಗೆ ಭಿಕ್ಷೆ ಬೇಡಿಕೊಂಡು ಸಂಗ್ರಹಿಸಿದ ಹಣದ ಹಂಚಿಕೆ ವಿಚಾರವಾಗಿ ಈ ಎರಡು ಗುಂಪುಗಳ ಮಧ್ಯೆ ಜಗಳವಾಗಿದೆ.
ಮಾಗಡಿ ರಸ್ತೆಯ ಸುಮಿತ್ರಾ ಗ್ಯಾಂಗ್ ನ 12 ಮಂದಿಯನ್ನು ಬಂಧಿಸಲಾಗಿದೆ. ಇವರು ಆಶಮ್ಮ ಗ್ಯಾಂಗ್ ನ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.