ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳು ಗ್ರಾಮ ವಾಸ್ತವ್ಯ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ.
ಆದರೆ ಮೊದಲ ಬಾರಿಗೆ ಎಸ್ ಪಿ ಒಬ್ಬರೂ ಸರ್ಕಾರಿ ಶಾಲೆಯಲ್ಲಿ ತಂಗುವ ಮೂಲಕ ರವಿ ಚೆನ್ನಣ್ಣನವರ್ ಅವರು ಮಾದರಿಯಾಗಿದ್ದಾರೆ.
ಭಾನುವಾರ ರಾತ್ರಿ ನೆಲಮಂಗಲದ ಬೊಮ್ಮನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಸಂಜೆ ವೇಳೆಗೆ ಶಾಲೆಗೆ ಬಂದ ರವಿ ಅವರು ಅಲ್ಲಿನ ಗ್ರಾಮಸ್ಥರ ಹಾಗೂ ಮಕ್ಕಳ ಜತೆ ಮಾತುಕತೆ ನಡೆಸಿ ನಂತರ ಅಲ್ಲೇ ಮಲಗಿದರು.