ಬೆಂಗಳೂರು: ಇಲ್ಲಿನ ರೇಸ್ ಕೋರ್ಸ್ ನಲ್ಲಿ ರೇಸ್ ನಿಲ್ಲಿಸಿದ ಕಾರಣಕ್ಕಾಗಿ ಪ್ರೇಕ್ಷಕರು ರೊಚ್ಚಿಗೆದ್ದ ಘಟನೆಯು ಶುಕ್ರವಾರ ನಡೆದಿದೆ.
ರೇಸ್ ನಲ್ಲಿ ಮೂರು ಕುದುರೆ ಹಾಗೂ ಇಬ್ಬರು ಜಾಕಿಗಳು ಗಾಯಗೊಂಡ ಹಿನ್ನೆಲೆಯಲ್ಲಿ ರೇಸ್ ನಿಲ್ಲಿಸಲಾಯಿತು. ಇದರಿಂದ ಪ್ರೇಕ್ಷಕರು ರೊಚ್ಚಿಗಿದ್ದರು. ಆದರೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು ಎಂದು ಆಡಳಿತ ಮಂಡಳಿ ಹೇಳಿದೆ.
ವರ್ಷದ ಮೊದಲ ರೇಸ್ ಇಂದು ಆಯೋಜನೆಗೊಂಡಿದ್ದು, ಅದು ಅರ್ಧದಲ್ಲೇ ನಿಂತ ಕಾರಣ ರೊಚ್ಚಿಗೆದ್ದ ಪ್ರೇಕ್ಷಕರು ಅಲ್ಲಿದ್ದ ಕುರ್ಚಿ, ಟಿವಿ ಹಾಗೂ ಟೇಬಲ್ ಗಳನ್ನು ಧ್ವಂಸ ಮಾಡಿದ್ದಾರೆ.