ಬೆಂಗಳೂರು: ರಾಮನಗರ ತಾಲೂಕಿನ ಕಲ್ಲನಕಪ್ಪೆ ಗ್ರಾಮದಲ್ಲಿ ರಾಜ್ಯ ಸಹಕಾರಿ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ನಡೆದಿದೆ.
ಇವರು ದೇವಸ್ಥಾನದ ಮುಂಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವರು. ವಿಧಾನಸೌಧದ ಸಹಕಾರಿ ಇಲಾಖೆಯಲ್ಲಿ ಬೆರಳಚ್ಚು ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಹೇಮಾವತಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹರೊಹಳ್ಳಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಹೇಮಾವತಿ ಅವರು ಪ್ರತಿನಿತ್ಯವು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಇದುವರೆಗೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.